ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸ್ತ್ರೋಕ್ತವಾಗಿ ಆದ ಮದುವೆ ಸಂಬಂಧಗಳು ಮುರಿದು ಬಿದ್ದು ವಿಚ್ಚೇದನಗಳು ಹೆಚ್ಚಾಗ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಗಡಿನಾಡಿನ ಅಪೂರ್ವ ಜೋಡಿಗಳು ನಮ್ಮ ಮುಂದಿದಿದ್ದಾರೆ. 50 ವರ್ಷ ಸಂಸಾರ ನಡೆಸಿರೋ 25ಕ್ಕೂ ಹೆಚ್ಚಿನ ಜೋಡಿಗಳು ಇಳಿ ವಯಸ್ಸಲ್ಲಿ ಮರು ಮದುವೆಯಾಗಿ ಸಂಭ್ರಮಿಸಿದ್ದಾರೆ.
Advertisement
ದು ಬೆಳಗಾವಿಯ ಬೈಲಹೊಂಗಲದ ಮದನಬಾವಿ ಗ್ರಾಮದಲ್ಲಿ ನಡೆದ ವಿಶಿಷ್ಟ ವಿವಾಹ ಸಂಭ್ರಮ. ಗ್ರಾಮದ ಶರಣೆ ನೀಲಗಂಗಮ್ಮ ತಾಯಿಯ ಹೆಸ್ರಲ್ಲಿ, 50 ವರ್ಷ ಸಂಸಾರ ಪೂರೈಸಿದ 25ಕ್ಕೂ ಹೆಚ್ಚು ಜೋಡಿಗೆ ಮರು ವಿವಾಹ ಮದುವೆ ಮಾಡಿಸಲಾಯ್ತು. ಈ ವೇಳೆ ಮೇಕಪ್ ಮಾಡಿಕೊಂಡು ಅಜ್ಜಂದಿರು ನವ ವಧು-ವರರರಂತೆ ಕಂಗೊಳಿಸುತ್ತಿದ್ರು. ಮರು ವಿವಾಹಕ್ಕೂ ಮುನ್ನ ಗ್ರಾಮದಲ್ಲಿ ಈ ಆದರ್ಶ ದಂಪತಿಗಳ ಅದ್ಧೂರಿ ಮೆರವಣಿಗೆ ನಡೀತು. ಬಳಿಕ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಮ್ಮುಖದಲ್ಲಿ 70-75 ವರ್ಷದ ಅಜ್ಜ ಅಜ್ಜಿಯಂದಿರು ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ರು.
Advertisement
Advertisement
ತಮ್ಮ ಹೆತ್ತವರ ಮದುವೆಯನ್ನ ಕಣ್ತುಂಬಿಕೊಂಡ ಮಕ್ಕಳು ಹಾಗೂ ಮೊಮ್ಮಕ್ಕಳು ಖುಷಿಗೆ ಪಾರವೇ ಇರಲಿಲ್ಲ. 50 ವರ್ಷ ದಾಂಪತ್ಯ ನಡೆಸಿದ ಅಜ್ಜ ಅಜ್ಜಿಯಂದಿರೂ ಸಹ ಅಡ್ಡಾಡಿ ಫೋಟೋಗೆ ಪೋಸ್ ಕೊಟ್ರು. ಒಟ್ಟಿನಲ್ಲಿ ಇಲ್ಲಿ ಸಿಹಿ ಇತ್ತು. ನಾಚಿಕೆ ಜೊತೆಗೆ ಪ್ರೀತಿ ಪ್ರೇಮ ಮೇಳೈಸಿತ್ತು. ನಗುನಗುತಾ ಬಾಳೋಣ ಅನ್ನೋ ಸಂದೇಶ ಇತ್ತು. ನೂರು ವರ್ಷ ಈ ಜೋಡಿ ಹೀಗೆ ಬಾಳಲಿ ಅನ್ನೋದು ನಮ್ಮ ಹಾರೈಕೆ.
Advertisement