24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ: ಹರೀಶ್ ಪೂಂಜಾ

Public TV
1 Min Read
HARISH POONJA

ಮಂಗಳೂರು: 24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ (Siddaramaiah) ಹತ್ಯೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಶಾಸಕ ಹರೀಶ್ ಪೂಂಜಾ (Harish Poonja) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ನಾಯಕರು ಕಾಂಗ್ರೆಸ್ (Congress) ಪರ ಮತಪ್ರಚಾರ ಮಾಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸತ್ಯಜಿತ್ ಸುರತ್ಕಲ್ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಮೇಲೆ ಕೊಲೆ ಆರೋಪ ಹೊರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇಳಲು ನೀವು ಯಾರು? – ಏರು ಧ್ವನಿಯಲ್ಲೇ ಡಿಕೆ ಸುರೇಶ್‌, ಎಂಬಿ ಪಾಟೀಲ್‌ ಫೈಟ್‌

Harish Poonja 1

ನಾನು ಹಿಂದುತ್ವಕ್ಕೆ ದ್ರೋಹ ಮಾಡಿದ್ದರೆ ನೀವು ಬಂದು ಇಲ್ಲಿ ಹರೀಶ್ ಪೂಂಜಾನನ್ನು ಸೋಲಿಸಲು ಪ್ರಯತ್ನ ಮಾಡಿದ್ದನ್ನು ನಾನು ಒಪ್ಪಿಕೊಳ್ಳುತ್ತಿದ್ದೆ. ನಾನು ಹಿಂದುತ್ವದ ಸಿದ್ಧಾಂತವನ್ನು ಬಿಟ್ಟಿದ್ದರೆ ನೀವು ಇಲ್ಲಿ ಬಂದು ಹಿಂದುತ್ವದ ವಿರುದ್ಧ ಕಾಂಗ್ರೆಸ್‌ಗೆ ಮತ ಹಾಕಿ ಎಂದಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಸತ್ಯಣ್ಣ ನಿಮ್ಮ ಹತ್ತಿರ ಒಂದು ಕೇಳುತ್ತೇನೆ. 24 ಜನ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದಂತಹ ಸಿದ್ದರಾಮಯ್ಯಗೆ ಮತ ಕೇಳಿದ್ದೀರಿ. ಬಜರಂಗದಳವನ್ನು (Bajarang Dal) ಬ್ಯಾನ್ ಮಾಡುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ಗೆ ನೀವು ವೋಟು ಕೇಳಿದ್ದೀರಿ. ಇವತ್ತು ಬೆಳ್ತಂಗಡಿ ತಾಲೂಕಿನ ಜನ ಸತ್ಯಣ್ಣ ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಕೇಳುತ್ತಿದ್ದಾರೆ. ಇದಕ್ಕೆ ಸತ್ಯಣ್ಣ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಗುರುವಾರ ಜೆಡಿಎಸ್‌ನಿಂದ ಪರಾಮರ್ಶೆ ಸಭೆ – ಮತ್ತೆ ಸಿನಿಮಾದತ್ತ ನಿಖಿಲ್ ಒಲವು

ಸಿದ್ದರಾಮಯ್ಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಲಾಭ ಪಡೆಯಲು ದುಂಬಾಲು – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌

Share This Article