ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆ (Karnataka Election) ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳ (Congress Guarantee) ಲಾಭವನ್ನು ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದೀಗ ಬಿಪಿಎಲ್ ಕಾರ್ಡ್ (BPL Card) ಮಾಡಿಸಲು ಸೈಬರ್ ಸೆಂಟರ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ.
ಹೊಸ ಕಾರ್ಡ್ ಮಾಡಿಸಲು ಜನ ಬೆಂಗಳೂರು ಒನ್ (Bangalore one) ಹಾಗೂ ಸೈಬರ್ ಸೆಂಟರ್‌ಗೆ ಧಾವಿಸುತ್ತಿದ್ದಾರೆ. ನಿತ್ಯ 20 ರಿಂದ 30 ಜನ ಒಂದೊಂದು ಸೈಬರ್ ಸೆಂಟರ್‌ಗೆ ಅರ್ಜಿ ಹಾಕಲು ಬರುತ್ತಿದ್ದಾರೆ. ಆದರೆ ಸರ್ಕಾರದಿಂದ ಹೊಸ ರೇಷನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಸ್ ಮರಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ
ಇನ್ನು ಕೆಲವು ಸೈಬರ್ ಸೆಂಟರ್ ಮಾಲೀಕರು ಕೂಡ ಹೊಸ ಅರ್ಜಿಗಳಿಗೆ ಅವಕಾಶ ನೀಡಿದ್ಯಾ ಎಂದು ಇಲಾಖಾ ವೆಬ್ ಸೈಟ್ ಓಪನ್ ಮಾಡಿ ಪರಿಶೀಲಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವ ಕಾರಣ ಸರ್ವರ್ ಸಮಸ್ಯೆ (Server Problem) ಆರಂಭವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್
ಸಾಧಾರಣವಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಇಲ್ಲಿಯವರೆಗೆ ಗ್ರಾಮೀಣ ಭಾಗಗಳಲ್ಲಿ ಜನ ಮುಗಿಬೀಳುತ್ತಿದ್ದರು. ಆದರೆ ಈಗ ಬೆಂಗಳೂರಿನಲ್ಲೂ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಶೇಷ.
ಜಾರಿ ಯಾವಾಗ?
ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದರು. ಆದರೆ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ಮಾತ್ರ ಸಿಕ್ಕಿದೆ.