ಕರ್ನಾಟಕದಲ್ಲಿ ಓಮಿಕ್ರಾನ್‌ ಸ್ಫೋಟ – ಇಂದು 23 ಮಂದಿಯಲ್ಲಿ ದೃಢ

Advertisements

ಬೆಂಗಳೂರು: ಇಂದು ಕರ್ನಾಟಕದ 23 ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ.

Advertisements

ಆರೋಗ್ಯ ಸಚಿವ ಸುಧಾಕರ್‌ ಟ್ವೀಟ್‌ ಮಾಡಿ ಅಮೆರಿಕ, ಯುರೋಪ್‌, ಮಧ್ಯ ಪ್ರಾಚ್ಯ, ದಕ್ಷಿಣ ಆಫ್ರಿಕಾ ದೇಶದಿಂದ ಬಂದ 19 ಮಂದಿ ಸೇರಿದಂತೆ ಒಟ್ಟು 23 ಮಂದಿಯಲ್ಲಿ ಸೋಂಕು ಕಾಣಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ನಿಂದ ಗುಣಮುಖರಾಗಿದ್ದ ವೃದ್ಧ ಸಾವು

Advertisements

ಸೋಂಕಿತರ ಸಂಪರ್ಕದಲ್ಲಿದ್ದ 4 ಮಂದಿಯಲ್ಲಿ ಓಮಿಕ್ರಾನ್‌ ಬಂದಿದೆ. ಬೆಂಗಳೂರು ಮೂಲದ ಅಮೆರಿಕದಿಂದ ಮರಳಿದ 5 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿದೆ. ಜಾನ್ಸನ್ ಅಂಡ್ ಜಾನ್ಸನ್ ವ್ಯಾಕ್ಸಿನ್ ಜೊತೆಗೆ ಬೂಸ್ಟರ್ ಡೋಸ್ ತೆಗೆದುಕೊಂಡಿರುವವರಿಗೆ ಪಾಸಿಟಿವ್ ಬಂದಿದೆ. ಅಸ್ಟ್ರಾಜೆನಿಕಾ 2 ಡೋಸ್‌, ಫೈಝರ್‌ ಎರಡು ಡೋಸ್ ತೆಗೆದುಕೊಂಡವರಿಗೂ ಕೊರೊನಾ ಬಂದಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಸುತ್ತಮುತ್ತ ಹೈಅಲರ್ಟ್

​ಬಿಬಿಎಂಪಿ ವ್ಯಾಪ್ತಿಯಲ್ಲಿ 20 ರಿಂದ 50 ವರ್ಷದೊಳಗಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಬಾಧಿತರಾಗುತ್ತಿದ್ದಾರೆ. ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರ ಪೈಕಿ ಹೆಚ್ಚಿನ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಗುರುವಾರದವರೆಗೆ ರಾಜ್ಯದಲ್ಲಿ ಒಟ್ಟು 43 ಮಂದಿಯಲ್ಲಿ ಓಮಿಕ್ರಾನ್‌ ಬಂದಿತ್ತು.

Advertisements

Advertisements
Exit mobile version