ದುಬೈ: ಅರಬ್ಬರ ನಾಡಲ್ಲಿ ಘಟಾನುಘಟಿ ತಂಡಗಳ ನಡುವೆ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ನಡುವೆ ಈ ಬಾರಿ ವಿಶ್ವಕಪ್‍ನಲ್ಲಿ ಹಲವು ಅಚ್ಚರಿಯ ಬೆಳವಣಿಗಳು ನಡೆದಿದೆ.
Advertisement
Advertisement
ಹೌದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿದರೆ, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಬಾರಿಗೆ ಬಗ್ಗು ಬಡಿಯುವ ಮೂಲಕ ಹಿಂದೆಂದೂ ಆಗದೇ ಇರುವಂತಹ ಗೆಲುವು ಸಾಧಿಸಿದೆ. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?
Advertisement
Advertisement
ಈ ವಿಶೇಷತೆಗಳು ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವಾದರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪರಸ್ಪರ ಮುಖಾಮುಖಿಯಾಗದ ಎರಡು ತಂಡಗಳು ಟಿ20 ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಹೌದು ಇದು ಅಚ್ಚರಿಯಾದರು ಸತ್ಯ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡ ಈವರೆಗೆ ಪರಸ್ಪರ ಎದುರು ಬದುರಾಗಿ ಆಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಚುಟುಕು ಸಮರದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಇಂಗ್ಲೆಂಡ್ ತಂಡ ಸೋಲಿಸಿ ಮೇಲುಗೈ ಸಾಧಿಸಿದೆ. ಇದನ್ನೂ ಓದಿ: ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್
ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಕ್ರಿಕೆಟ್‍ನಲ್ಲಿ ಒಂದು ಬಾರಿಯೂ ಮುಖಾಮುಖಿಯಾಗದಿದ್ದರು ಏಕದಿನ ಕ್ರಿಕೆಟ್‍ನಲ್ಲಿ 31 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಇಂಗ್ಲೆಂಡ್ ತಂಡ 26 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ ತಂಡ 5 ಪಂದ್ಯಗಳನ್ನು ಗೆದ್ದಿದೆ. ಇದೀಗ ಮೊದಲ ಟಿ20 ಕ್ರಿಕೆಟ್ ಮುಖಾಮುಖಿಯಲ್ಲೂ ಇಂಗ್ಲೆಂಡ್ ಗೆಲುವಿನ ಸಂಭ್ರಮ ಆಚರಿಸಿದೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್