ಬೊಗೋಟಾ: ನೈರುತ್ಯ ಕೊಲಂಬಿಯಾದ (Colambia) ಪ್ಯಾನ್-ಅಮೆರಿಕ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ (Bus Accident) 20 ಮಂದಿ ದಾರುಣ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ.
ಕನಿಷ್ಠ 20 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಮತ್ತು 8 ವರ್ಷದ ಬಾಲಕ ಸೇರಿದ್ದಾರೆ. ಈ ಬಸ್ಸು ಕೊಲಂಬಿಯಾದ ಟೊಮಾಕೊ ಬಂದರು ನಗರ ಹಾಗೂ ಈಶಾನ್ಯ ನಡುವೆ ಪ್ರಯಾಣಿಸುತ್ತಿತ್ತು ಎಂಬುದಾಗಿ ನರಿನೋ ವಿಭಾಗದ ಟ್ರಾಫಿಕ್ ಪೊಲೀಸ್ (Traffic Police) ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್ ಅಗುಡೆಲೊ ತಿಳಿಸಿದ್ದಾರೆ.
Advertisement
Advertisement
ಮಂಜು ಕವಿದ ವಾತಾವರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದೆ ಎಂಬುದಾಗಿ ಪ್ರಾಥಮಿಕ ವರದಿ ಹೇಳಿದೆ. ಇನ್ನೇನಾದರೂ ತಾಂತ್ರಿಕ ವ್ಯವಸ್ಥೆಗಳಲ್ಲಿ ವ್ಯತ್ಯಾಸವಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ
Advertisement
Advertisement
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್, ಅಗ್ನಿಶಾಮಕ ದಳದ (Fire Departments) ಸಿಬ್ಬಂದಿ ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.