ಬೆಂಗಳೂರು: ಜಿಎಸ್ಟಿ (GST) ಕಟ್ಟಬೇಕೆಂದು ಹೇಳಿ ಖಾಸಗಿ ಕಂಪನಿಗೆ ಬರೋಬ್ಬರಿ 9.60 ಕೋಟಿ ರೂ. ವಂಚಿಸಿರುವಂತಹ (Cheating) ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಸಂಜಯ್ ನಗರ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ನಿಖಿಲ್ ಹಾಗೂ ವಿನಯ್ ಬಾಬು ಬಂಧಿತ ಆರೋಪಿಗಳು.
Advertisement
ಕೊರಿಯಾ ಮೂಲದ ಟರ್ಮಿನಸ್ ಡೆಚಾಂಗ್ ಸೀಟ್ ಎಂಬ ಆಟೋಮೋಟಿವ್ ಖಾಸಗಿ ಕಂಪನಿಗೆ ಇಬ್ಬರು ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಆಗಿ ಸೇರಿಕೊಂಡಿದ್ದರು. ಕೆಲಸಕ್ಕೆ ಸೇರಿಕೊಂಡವರು ಜಿಎಸ್ಟಿ ಕಟ್ಟಬೇಕು ಎಂದು ಕಂಪನಿ ಮಾಲೀಕರ ಬಳಿ ಸುಮಾರು 9.60 ಕೋಟಿ ಹಣವನ್ನು ಹಂತ ಹಂತವಾಗಿ ಪಡೆದಿದ್ದಾರೆ.
Advertisement
Advertisement
ಆಂತರಿಕ ಲೆಕ್ಕಪರಿಶೋಧನೆ ಸಿದ್ದಪಡಿಸಿದ್ದ ನಿಖಿಲ್ ಕಂಪನಿ 9 ಕೋಟಿಗೂ ಹೆಚ್ಚು ಜಿಎಸ್ಟಿ ಕಟ್ಟಬೇಕೆಂದು ವರದಿ ನೀಡಿದ್ದ. ನಿಖಿಲ್ ವರದಿ ಅನ್ವಯ ಹಂತಹಂತವಾಗಿ ಮಾಲೀಕರು ಜಿಎಸ್ಟಿ ಪಾವತಿಸಿದ್ದರು. ಬಳಿಕ ಮಾಲೀಕರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿತ್ತು. ಇದನ್ನೂ ಓದಿ: ವಿದ್ಯುತ್ ಬಿಲ್ ಕಟ್ಟು ಎಂದಿದ್ದಕ್ಕೆ ಹಲ್ಲೆ
Advertisement
ಈ ಬಗ್ಗೆ ಸತ್ಯ ತಿಳಿಯುತ್ತಿದ್ದಂತೆ ಕಂಪನಿ ಸದಾಶಿವನಗರ ಠಾಣೆಗೆ ದೂರು ನೀಡಿತ್ತು. ಆರೋಪಿಗಳ ಕಚೇರಿ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನಲೆ ಪ್ರಕರಣ ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಸಂಜಯ್ ನಗರ ಪೊಲೀಸರು ನಿಖಿಲ್, ವಿನಯ್ ಬಾಬುವನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಷ್ಥೇ ಅಲ್ಲದೇ ಆರೋಪಿಗಳಿಗೆ ಸಂಬಂಧಿಸಿದ 3 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಶೋಕಿಗೆ ಕೋಟ್ಯಂತರ ಹಣ ಖರ್ಚುಮಾಡಿದ್ದು, ಆರೋಪಿ ವಿನಯ್ ಬಾಬು ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿಸಿದ ವಿಚಾರ ಬೆಳಕಿಗೆ ಬಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k