ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

Public TV
1 Min Read
belagavi kid

ಚಿಕ್ಕೋಡಿ(ಬೆಳಗಾವಿ): ಎರಡೂವರೆ ವರ್ಷದ ಮಗುವೊಂದು ಬೋರ್​ವೆಲ್​ಗೆ ಬಿದ್ದು, ಪ್ರಾಣಬಿಟ್ಟಿರುವ ಕರುಣಾಜನಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ನಡೆದಿದೆ.

belagavi kid 2

ಶರತ್ ಸಿದ್ದಪ್ ಹಸರೆ (2) ಮೃತ ದುರ್ದೈವಿ. ನಿನ್ನೆ ಸಂಜೆಯಿಂದಲೇ ಮಗು ನಾಪತ್ತೆಯಾಗಿತ್ತು. ಕುಟುಂಬದವರು ಮಗುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಮನೆಯಿಂದ 200 ಮೀ. ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಮಗು ಶರತ್ ಬಿದ್ದಿರುವುದು ತಿಳಿದುಬಂದಿದೆ. 15 ಅಡಿ ಆಳದಲ್ಲಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮಗು ಶವವಾಗಿ ಪತ್ತೆಯಾಗಿದೆ. ಇದನ್ನೂ ಓದಿ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

belagavi kid

ಆಟವಾಡುತ್ತ ಹೋಗಿ ಮನೆಯಿಂದ ನೂರು ಅಡಿ ದೂರದಲ್ಲಿದ್ದ ಬೋರ್​ವೆಲ್​ಗೆ ಶರತ್ ಬಿದ್ದಿದ್ದಾನೆ. ಆದರೆ ಮಗು ಕಾಣದಿರುವುದುನ್ನು ಗಮನಿಸಿದ ಪೋಷಕರು ಮಗು ಅಪಹರಣವಾಗಿರಬಹದು ಎಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೋಟದ ಮನೆಯಲ್ಲಿ ವಾಸವಿರುವ ಮಗು ಶರತ್ ತಂದೆ ಸಿದ್ದಪ್ಪ ಮತ್ತು ಕುಟುಂಟದವರು ಮಗು ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದರು. ಮಗುವನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

belagavi kid 1

ಈ ವೇಳೆ ನಿನ್ನೆ ಕಾಣೆಯಾಗಿದ್ದ ಮಗು ಇಂದು ಬೋರ್​ವೆಲ್​ನಲ್ಲಿ ಶವವಾಗಿ ಪತ್ತೆಯಾಗಿದೆ. ಸುಮಾರು 7 ಅಡಿಗಳಷ್ಟು ಆಳದಲ್ಲಿ ಬೋರ್​ವೆಲ್​ನಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿ ಶಾಮಕದಳದ ಕಾರ್ಯಾಚರಣೆ, ಹಗ್ಗ ಬಿಟ್ಟು ಶವ ತೆಗೆಯಲಾಗಿದೆ. ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಮಾಡಿ ಎಸೆಯಲಾಗಿದೆಯಾ ಅಥವಾ ಆಟವಾಡುತ್ತಾ ಬೋರ್​ವೆಲ್​ಗೆ ಬಿದ್ದಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *