ಮುಂಬೈ: ಉಕ್ರೇನ್‍ನಿಂದ 219 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ಇಂದು ರಾತ್ರಿ ಮುಂಬೈಗೆ ಬಂದಿಳಿದಿದೆ.
ಇಂದು ಮಧ್ಯಾಹ್ನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‍ನಿಂದ ಭಾರತದ ಪ್ರಜೆಗಳನ್ನು ಹೊತ್ತು ವಿಮಾನ ಟೇಕಾಫ್ ಆಗಿತ್ತು. ಉಕ್ರೇನ್‍ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿದೆ. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ ಕೊಡಗಿನ ಒಟ್ಟು 10 ವಿದ್ಯಾರ್ಥಿಗಳು
Advertisement
Three Cheers For India!
Interacted with the Indian evacuees from Ukraine at the Mumbai airport.
Urged them to convey to their friends back in Ukraine that the Govt. has their back. #OperationGanga pic.twitter.com/45jIuncIWT
— Piyush Goyal (@PiyushGoyal) February 26, 2022
Advertisement
ರೊಮೇನಿಯಾದಿಂದ ಮೂರು ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಈ ಪೈಕಿ ಒಂದು ಮುಂಬೈನಲ್ಲಿ ಲ್ಯಾಂಡ್ ಆಗಿದ್ದು, ಬಾಕಿ ಎರಡು ವಿಮಾನ ದೆಹಲಿಗೆ ಬರಲಿವೆ. ಆ ವಿಮಾನ ಇಂದು ಮಧ್ಯರಾತ್ರಿ ಒಂದು ವಿಮಾನ ದೆಹಲಿ ತಲುಪಿದ್ರೆ. ಮತ್ತೊಂದು ನಾಳೆ ಬೆಳಗ್ಗೆ ಐದು ಗಂಟೆಗೆ ರೊಮೇನಿಯಾದಿಂದ ಹೊರಡಲಿದ್ದು, 27 ರ ಮಧ್ಯರಾತ್ರಿ ತಲುಪಲಿದೆ ಎಂದು ತಿಳಿಸಲಾಗಿದೆ.
Advertisement
Welcome back to the motherland!
Glad to see the smiles on the faces of Indians safely evacuated from Ukraine at the Mumbai airport.
Govt. led by PM @NarendraModi ji is working relentlessly to ensure safety of every Indian. pic.twitter.com/fjuzjtNl9r
— Piyush Goyal (@PiyushGoyal) February 26, 2022
Advertisement
ಹಂಗೇರಿಯಿಂದ ಒಂದು ವಿಮಾನ ದೆಹಲಿಗೆ ಆಗಮಿಸಲಿದೆ. ನಾಳೆ ಬೆಳಗ್ಗೆ 6-7 ಗಂಟೆಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು