ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದು, ಇದೀಗ ಪಟಿಯಾಲ ಜೈಲಿನಲ್ಲಿ ಖೈದಿ ಸಂಖ್ಯೆ 241383 ಆಗಿದ್ದಾರೆ.
1988ರ ರಸ್ತೆಯಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು ಶುಕ್ರವಾರ ನವಜೋತ್ ಸಿಂಗ್ ಸಿಧು ನ್ಯಾಯಾಲಯಕ್ಕೆ ಶರಣಾಗಿದ್ದರು. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಇದನ್ನೂ ಓದಿ: 1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು
Advertisement
Advertisement
ಜೈಲಿಗೆ ಹೋದ ಸಿಧು ಅವರಿಗೆ ಖೈದಿಗಳಂತೆ ಸಂಖ್ಯೆಯೊಂದನ್ನು ನೀಡಿ, 10ನೇ ಬ್ಯಾರಕ್‍ನಲ್ಲಿದ್ದಾರೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಂಟು ಮಂದಿಯೊಂದಿಗೆ ಸಿಧು ಅವರು ಸೆಲ್ ಹಂಚಿಕೊಳ್ಳುತ್ತಿದ್ದಾರೆ ಮತ್ತು ಸಿಮೆಂಟ್ ಕಟ್ಟೆಯ ಮೇಲಿರುವ ಹಾಸಿಗೆ ಮೇಲೆ ಮೊದಲ ದಿನ ಮಲಗಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
Advertisement
1988 road rage case | Punjab: Congress leader Navjot Singh Sidhu leaves for Sessions Court, from his residence in Patiala. pic.twitter.com/u9B0g87n5C
— ANI (@ANI) May 20, 2022
Advertisement
ಶುಕ್ರವಾರ ಸಂಜೆ 7:15 ಕ್ಕೆ ಸಿಧುಗೆ ದಾಲ್ ಮತ್ತು ರೋಟಿಯನ್ನು ನೀಡಲಾಗಿದೆ. ಆದರೆ ಅನಾರೋಗ್ಯದ ಕಾರಣ ನೀಡಿ ಅವರು ಅದನ್ನು ಸೇವಿಸಲು ನಿರಾಕರಿಸಿದರು. ಅವರು ಸಲಾಡ್ ಮತ್ತು ಕೆಲವು ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ
ಸಿಧು ಅವರಿಗೆ ಒಂದು ಟೇಬಲ್, ಒಂದು ಕುರ್ಚಿ, ಎರಡು ಪೇಟಗಳು, ಒಂದು ಬೀರು, ಒಂದು ಹೊದಿಕೆ, ಮೂರು ಸೆಟ್ ಒಳ ಉಡುಪು, ಎರಡು ಟವೆಲ್, ಒಂದು ಸೊಳ್ಳೆ ಪರದೆ, ಒಂದು ಪೆನ್ನು, ಒಂದು ನೋಟ್ ಬುಕ್, ಒಂದು ಜೊತೆ ಶೂ, ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಎರಡು ಬೆಡ್ ಶೀಟ್, ನಾಲ್ಕು ಜೊತೆ ಕುರ್ತಾ ಪೈಜಾಮ ಮತ್ತು ಎರಡು ದಿಂಬಿನ ಕವರ್ ನೀಡಲಾಗಿದೆ ಎನ್ನಲಾಗುತ್ತಿದೆ.