ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಳಿತ ಮುಂದುವರಿದಿದೆ. ನಿನ್ನೆ ಎರಡು ಸಾವಿರ ಗಡಿದಾಟಿದ್ದ ಕೇಸ್ಗಳ ಪೈಕಿ ಇಂದು ಇಳಿಕೆ ಕಂಡಿದೆ. ಒಟ್ಟು 1,694 ಪಾಸಿಟಿವ್ ಕೇಸ್ ಮತ್ತು 1 ಮರಣ ಪ್ರಕರಣ ದಾಖಲಾಗಿದೆ.
Advertisement
ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆ 11,403 ದಾಖಲಾಗಿತ್ತು. ಇಂದು 11,355ಕ್ಕೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಪಾಸಿಟಿವ್ ಕೇಸ್ಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,105 ಪ್ರಕರಣ ಪತ್ತೆಯಾಗಿದ್ದು, ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,096ಕ್ಕೆ ತಲುಪಿದೆ. ನಗರದ ಜೊತೆಗೆ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ರಾಯಚೂರಿನಲ್ಲಿ ದಾಖಲಾದ ಏಕೈಕ ಮರಣ ಪ್ರಕರಣ ಸೇರಿ ಈವರೆಗೆ ಒಟ್ಟು 40,114 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,741 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ ಶೇ. 6.02ಕ್ಕೆ ತಲುಪಿದೆ. ಇದನ್ನೂ ಓದಿ: ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ- ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV
Advertisement
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 40,18,250 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,66,739 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 63,999 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 28,118 ಸ್ಯಾಂಪಲ್ (ಆರ್ಟಿಪಿಸಿಆರ್ 21,329 + 6,789 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ- ವರ್ಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿದ ಬಿಬಿಎಂಪಿ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 15, ಬಳ್ಳಾರಿ 48, ಬೆಳಗಾವಿ 80, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 1,105, ಬೀದರ್ 6, ಚಾಮರಾಜನಗರ 10, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 8, ಚಿತ್ರದುರ್ಗ 0, ದಕ್ಷಿಣ ಕನ್ನಡ 15, ದಾವಣಗೆರೆ 32, ಧಾರವಾಡ 98, ಗದಗ 5, ಹಾಸನ 8, ಹಾವೇರಿ 14, ಕಲಬುರಗಿ 20, ಕೊಡಗು 22, ಕೋಲಾರ 15, ಕೊಪ್ಪಳ 11, ಮಂಡ್ಯ 12, ಮೈಸೂರು 48, ರಾಯಚೂರು 16, ರಾಮನಗರ 1, ಶಿವಮೊಗ್ಗ 34, ತುಮಕೂರು 5, ಉಡುಪಿ 7, ಉತ್ತರ ಕನ್ನಡ 34, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 3 ಪಾಸಿಟಿವ್ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]