LatestMain PostNational

ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ- ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV

Advertisements

ಲಕ್ನೋ: ಅಗ್ಗದ ಬೆಲೆಯೆಂದು ಹಚ್ಚೆ ಹಾಕಿಸಿಕೊಂಡಿದ್ದ ಇಬ್ಬರಿಗೆ ಹೆಚ್‍ಐವಿ ಸೋಂಕು ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಓರ್ವ ಯುವಕ ಹಾಗೂ ಓರ್ವ ಮಹಿಳೆ ಅಗ್ಗದ ಬೆಲೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಟ್ಯಾಟೂ ಹಾಕಿಸಿಕೊಂಡಿದ್ದವರ ಆರೋಗ್ಯವು ಹದಗೆಡಲು ಪ್ರಾರಂಭಿಸಿದೆ. ಅಸ್ವಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಪದೇ ಪದೇ ಜ್ವರ ಬರುತ್ತಿದ್ದುದನ್ನು ಗಮನಿಸಿದ್ದ ಅವರಿಗೆ ವೈರಲ್ ಟೈಫಾಯಿಡ್, ಮಲೇರಿಯಾ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಜ್ವರ ಕಡಿಮೆಯಾಗದಿದ್ದಾಗ, ಹೆಚ್‍ಐವಿ ಪರೀಕ್ಷೆ ಮಾಡಲಾಗಿದ್ದು, ಅದು ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

ಈ ಸಂದರ್ಭದಲ್ಲಿ ಅವರು ಯಾವುದೇ ಹೆಚ್‍ಐವಿ ವ್ಯಕ್ತಿಯನ್ನು ಸಂಪರ್ಕಿಸದೇ ಇರುವುದು ಬಯಲಾಗಿದ್ದು, ಎಲ್ಲರೂ ಕಡಿಮೆ ಬೆಲೆಯಲ್ಲಿ ಸಿಗುವ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ಅದಕ್ಕೆ ಟ್ಯಾಟೂ ಪಾರ್ಲರ್‌ನವರು ಹಚ್ಚೆ ಸೂಜಿಗಳು ದುಬಾರಿಯಾಗಿದ್ದು, ಹಣವನ್ನು ಉಳಿಸಲು ಅದೇ ಸೂಜಿಗಳನ್ನು ಬಳಸುತ್ತಿದ್ದಾರೆ. ಇದೇ ರೀತಿ ಹೆಚ್‍ಐವಿ ಸೋಂಕಿತನಿಗೆ ಬಳಸಿದ್ದ ಸೂಜಿಯನ್ನೇ ಎಲ್ಲರಿಗೂ ಬಳಸಿ ಹಚ್ಚೆ ಹಾಕಿದ್ದಾರೆ ಎನ್ನುವ ವಿಷಯವು ಬಯಲಾಗಿದೆ. ಘಟನೆ ಸಂಬಂಧಿಸಿ ಅಗ್ಗದ ಟ್ಯಾಟೂ ಪಾರ್ಲರ್‌ಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ತೃಣಮೂಲ ನಾಯಕನ ಪತ್ನಿ, ಮಗನಿಗೆ ಅಮಾನುಷವಾಗಿ ಥಳಿತ

Live Tv

Leave a Reply

Your email address will not be published.

Back to top button