– ಕಸದ ಟೆಂಡರ್ ಹಿಂದೆ ಬೆಂಗಳೂರಿನ ಮಂತ್ರಿ ಕೈವಾಡ
– 3 ಕೋಟಿ ಟರ್ನ್ ಓವರ್ ಮಾಡೋ ಮುನಿಯಪ್ಪ ಕಂಪನಿಗೆ ಯಾಕೆ ಟೆಂಡರ್?
ಬೆಂಗಳೂರು: ಸರ್ಕಾರ ಬೆಂಗಳೂರಿನ ಕಸದ ಟೆಂಡರ್ ನಲ್ಲಿ (Garbage Tender) ದೊಡ್ಡ ಅಕ್ರಮ ಮಾಡಿದೆ. ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ ನಿಯಮ ಮೀರಿ ಟೆಂಡರ್ ಕೊಡಲಾಗಿದ್ದು, ಇದರ ಹಿಂದೆ ಬೆಂಗಳೂರಿನ ಮಂತ್ರಿ ಕೈವಾಡ ಇದೆ ಅಂತ ವಿಪಕ್ಷ ನಾಯಕ ಅಶೋಕ್ (R Ashok) ದಾಖಲಾತಿ ಸಮೇತ ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದರಲ್ಲೂ ರಿಯಲ್ ಎಸ್ಟೇಟ್ ಸಿಎಂ ಡಿಕೆ ಶಿವಕುಮಾರ್ (DK Shivakumar) ಬಂದ ಮೇಲೆ ಅಕ್ರಮಗಳ ಮೇಲೆ ಅಕ್ರಮ ಆಗ್ತಿದೆ. ಕಸದಿಂದ ರಸ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಕಸದಲ್ಲಿ ಅಕ್ರಮ ಮಾಡೋಕೆ ಮುಂದಾಗಿದೆ ಅಂತ ಆರೋಪ ಮಾಡಿದ್ರು. ಕೃಷ್ಣಭೈರೇಗೌಡ ಹೊಸದಾಗಿ ಮಂತ್ರಿ ಆದಾಗ ಏನೇನೋ ಮಾತಾಡಿದ್ರು. ಫ್ರೀಡಂ ಫರ್ಮ್ ವೇಸ್ಟ್ ಅಂತ ತೆಗೆದು ಹಾಕಿ ಈಗ ವೇಸ್ಟ್ ಇಂದ ಮನಿ. ಹೌ ಟು ಮೇಕ್ ಮನಿ ಕಸದಿಂದ? ಅಂತ ಮಾಡಿದ್ದಾರೆ. 133 ಕೋಟಿ ಟೆಂಡರ್ ಮುನಿಯಪ್ಪ ಎಂಟರ್ ಪ್ರೈಸಸ್ ಅವರಿಗೆ ಕೊಡಲಾಗಿದೆ. ಆ ಕಂಪನಿಯೇ ಬೇನಾಮಿ. GST ಸೇರಿ ಯಾವುದು ಇಲ್ಲ ಇಂತಹವರಿಗೆ ಟೆಂಡರ್ ಕೊಡಲಾಗಿದೆ ಅಂತ ಆರೋಪ ಮಾಡಿದ್ರು.
2018 ರಲ್ಲಿ ಸರ್ಕಾರ ಒಂದು ರೂಲ್ ಮಾಡುತ್ತದೆ. 10 ಕೋಟಿ ವ್ಯವಹಾರ ಮಾಡೋನು ಟೆಂಡರ್ ನಲ್ಲಿ ಭಾಗವಹಿಸಬೇಕು ಅಂತ ಮಾಡ್ತಾರೆ. ಇಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಹೆಚ್ಚುವರಿ ಭದ್ರತಾ ಠೇವಣಿ ಆ ಕಂಪನಿಯಿಂದ ಪಡೆದಿಲ್ಲ. ಹಣಕಾಸು ಇಲಾಖೆ ಹೀಗೆ ಟೆಂಡರ್ ಮಾಡಬಾರದು ಅಂತ ಎಚ್ಚರಿಕೆ ಕೊಟ್ಟ ಮೇಲೂ ಒಪ್ಪಿಗೆ ಪತ್ರ( LOA) ಸರ್ಕಾರ ಕೊಟ್ಟಿದೆ. ಪ್ಯಾಕೇಜ್ 2 ಮತ್ತು 5 ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿ ಕೊಡದೇ ಮುನಿಯಪ್ಪ ಎಂಟರ್ಪ್ರೈಸ್ ಗೆ ಕಾರ್ಯಾದೇಶದ ಅನುಮತಿ ಕೊಡಲಾಗಿದೆ ಅಂತ ದಾಖಲಾತಿ ಬಿಡುಗಡೆ ಮಾಡಿದರು.
ಪ್ಯಾಕೇಜ್ 2 ನಲ್ಲಿ ಸುಮಾರು 6.5 ಕೋಟಿ ಠೇವಣಿ ಕೊಟ್ಟಬೇಕಿತ್ತು. ಪ್ಯಾಕೇಜ್ 5 ರಲ್ಲಿ 5.99 ಕೋಟಿ ಠೇವಣಿ ಕಟ್ಟಿಲ್ಲ. ಒಟ್ಟು 12.99 ಕೋಟಿ ಭದ್ರತಾ ಠೇವಣಿ ಕಟ್ಟಿಲ್ಲ ಆ ಕಂಪನಿ. ನಿಯಮ ಗಾಳಿಗೆ ತೂರಿ ಕಿಕ್ಬ್ಯಾಕ್ ಪಡೆಯಲು ಟೆಂಡರ್ ಕೊಡಲಾಗಿದೆ. ಮುನಿಯಪ್ಪ ಎಂಟರ್ ಪ್ರೈಸಸ್ ನಿಂದ ಕಿಕ್ ಬ್ಯಾಕ್ ಪಡೆಯಲು ನಿಯಮ ಗಾಳಿಗೆ ತೂರಲಾಗಿದೆ. ಮಿಸ್ಟರ್ ಡಿಕೆ ಶಿವಕುಮಾರ್ ಇದು ಅಕ್ರಮದ ಲೈನ್ ಅಂತ ಆರೋಪ ಮಾಡಿದ್ರು. 3 ಕೋಟಿ ಮಾತ್ರ ಅ ಕಂಪನಿ ಟರ್ನ್ ಓವರ್ ಮಾಡಿದೆ. ಟೆಂಡರ್ ಕೊಡಲು 10 ಕೋಟಿ ಇರಬೇಕು ಅಂತ ಸರ್ಕಾರದ ನಿಯಮ ಇದೆ. 3 ಕೋಟಿ ಟರ್ನ್ ಓವರ್ ಮಾಡೋ ಮುನಿಯಪ್ಪ ಕಂಪನಿಗೆ ಯಾಕೆ ಟೆಂಡರ್ ಕೊಟ್ರಿ ಅಂತ ಪ್ರಶ್ನೆ ಮಾಡಿದ್ರು.
ಮುನಿಯಪ್ಪ ಕಂಪನಿಗೆ ನೀಡಿರುವ ಟೆಂಡರ್ನಲ್ಲಿ ಅರ್ಹತಾ ಷರತ್ತು ಉಲ್ಲಂಘನೆ ಆಗಿದೆ. ಅವನ ಬಳಿ ದುಡ್ಡು ತಗೊಂಡು ಟೆಂಡರ್ ಕೊಡಲಾಗಿದೆ. 40% ಕಮೀಷನ್ ಪಡೆಯಲು ಈ ವಿನಾಯಿತಿ ಅ ಕಂಪನಿಗೆ ಕೊಡಲಾಗಿದೆ ಅಂತ ಅಶೋಕ್ ಗಂಭೀರ ಆರೋಪ ಮಾಡಿದ್ರು. ಜಾಗ ಗುರುತು ಮಾಡದೇ ಕಮೀಷನ್ ಪಡೆಯಲು ತರಾತುರಿಯಲ್ಲಿ ಟೆಂಡರ್ ಕೊಡಲಾಗಿದೆ. ರಿಯಲ್ ಎಸ್ಟೇಟ್ ಸಿಎಂ ಅವರು ಯಾರಾದ್ರು ಕಾಸು ಕೇಳಿದ್ರೆ ಫೋನ್ ಮಾಡಿ ಅಂದರು. ಸಿಎಂ ಅವರೇ ಡೂಪ್ಲಿಕೇಟ್, ಇದೂವರೆಗೂ ನಂಬರ್ ಕೊಟ್ಟಿಲ್ಲ. ಯಾವ ನಂಬರ್ಗೆ ದೂರು ಕೊಡೋದು. ಕಾಸಿಗಾಗಿ ಕಸ ಇದು. ಈ ಸರ್ಕಾರ ಪಾರದರ್ಶಕನಾ? ಲೂಟಿ ಮಾಡೋದೇ ಇವರ ಪಾರದರ್ಶಕನಾ ಅಂತ ಪ್ರಶ್ನೆ ಮಾಡಿದ್ರು.
ತ್ಯಾಜ್ಯ ವರ್ಗಾವಣೆ ಸ್ಟೇಷನ್ ಗಳ ಎಲ್ಲಾ ಪ್ಯಾಕೇಜ್ ಗಳನ್ನ ಉನ್ನತ ಮಟ್ಟದ ತನಿಖೆ ಮಾಡಬೇಕು. ಲೋಕಾಯುಕ್ತ ತನಿಖೆಗೆ ಕೊಡಬೇಕು. 21 ಪ್ಯಾಕೇಜ್ ನಲ್ಲೂ ಅಕ್ರಮ ಆಗಿದೆ. ಪ್ಯಾಕೇಜ್ 2 ಮತ್ತು 5 ರ ಕಡತ ಕೂಡಲೇ ಸೀಜ್ ಮಾಡಬೇಕು. ಗುತ್ತಿಗೆದಾರನ ಅರ್ಹತೆ, ಸಾಮರ್ಥ್ಯ, ಅನುಭವ ಇದೆಯಾ ಸರ್ಕಾರ ತಿಳಿಸಬೇಕು. ಇಲ್ಲ ಅಂದರೆ ಕಾಸು ಕೊಟ್ಟವರಿಗೆ ಕೊಟ್ಟಂತೆ ಆಗುತ್ತದೆ. ಕಸ ಹಾಕೋಕೆ ಜಾಗ ಎಲ್ಲಿ ಗುರುತಿಸಿದ್ದೀರಾ? ಮಾಹಿತಿ ಕೊಡಬೇಕು ಅಂತ ಆಗ್ರಹ ಮಾಡಿದ್ರು.
ನಿಯಮ ಉಲ್ಲಂಘನೆ ಮಾಡಲಾಗಿದೆ. ಇದರ ಹಿಂದೆ ಒಬ್ಬ ಮಂತ್ರಿ ಕೈವಾಡ ಇದೆ. ಬೆಂಗಳೂರು ಮಂತ್ರಿ ಅವರು. ಯಾರು ಅಂತ ಮುಂದೆ ಹೇಳ್ತೀನಿ. ಟೆಂಡರ್ ರದ್ದು ಮಾಡಿ ಅಂತ ನಾಳೆ ಸಿಎಂಗೆ ಪತ್ರ ಬರೆಯುತ್ತೇನೆ. ಸಿಎಂ ಮಾತಿಗೆ ಮೂರು ಕಾಸು ಬೆಲೆ ಕೊಟ್ಟಿಲ್ಲ. ಇದು ಬೋಗಸ್ ಅಂತ ಸಿಎಂ ಹೇಳಿದ್ದಾರೆ. ತನಿಖೆ ಮಾಡಿ ಅಂತ ಹೇಳಿದ್ರು.ಹೀಗಿದ್ರು ಟೆಂಡರ್ ಕೊಡಲಾಗಿದೆ. ಯಾರು ಒತ್ತಡ ಹಾಕಿದ್ರು ಸಿಎಂ ಹೇಳಲಿ.ಹೈಕಮಾಂಡ್ ಗೆ ಅವರು ಹತ್ತಿರ ಇರೋ ಮಂತ್ರಿ ಅಂತ ಆರೋಪ ಮಾಡಿದ್ರು.


