ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ವಿಜೃಂಭಣೆ ಮುಂದುವರೆದಿದೆ. ರಾಜ್ಯದಲ್ಲಿಂದು 10 ಸಾವಿರಕ್ಕೂ ಹೆಚ್ಚು ಕೇಸ್ ವರದಿ ಆಗಿದೆ. ಇಂದು ಬರೋಬ್ಬರಿ 12,000 ಕೇಸ್ ಬಂದಿದೆ. ಬೆಂಗಳೂರಲ್ಲಿ ಹೊಸ ಕೇಸ್‍ಗಳ ಸಂಖ್ಯೆ 9,020ಕ್ಕೆ ಏರಿದೆ.
ರಾಜ್ಯದಲ್ಲಿ ಪಾಸಿಟಿವಿ ರೇಟ್ 6.33 ಇದೆ. ಇಂದು ರಾಜ್ಯದಲ್ಲಿ 901 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 29,63,957 ಮಂದಿ ಬಿಡುಗಡೆಗೊಂಡಿದ್ದಾರೆ.
49,602 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ ಒಟ್ಟು ನಾಲ್ವರು ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 38,370 ಮಂದಿ ಮೃತಪಟ್ಟಿದ್ದಾರೆ. 1,89,499 ಮಂದಿಗೆ ಇಂದು ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 10, ಬಳ್ಳಾರಿ 107, ಬೆಳಗಾವಿ 105, ಬೆಂಗಳೂರು ಗ್ರಾಮಾಂತರ 98, ಬೆಂಗಳೂರು ನಗರ 9020, ಬೀದರ್ 20, ಚಾಮರಾಜನಗರ 26, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 78, ಚಿತ್ರದುರ್ಗ 24, ದಕ್ಷಿಣ ಕನ್ನಡ 298, ದಾವಣಗೆರೆ 30, ಧಾರವಾಡ 147, ಗದಗ 7, ಹಾಸನ 182, ಹಾವೇರಿ 8, ಕಲಬುರಗಿ 98, ಕೊಡಗು 29, ಕೋಲಾರ 83, ಕೊಪ್ಪಳ 19, ಮಂಡ್ಯ 261, ಮೈಸೂರು 398, ರಾಯಚೂರು 7, ರಾಮನಗರ 20, ಶಿವಮೊಗ್ಗ 198, ತುಮಕೂರು 190, ಉಡುಪಿ 340, ಉತ್ತರ ಕನ್ನಡ 94, ವಿಜಯಪುರ 49 ಹಾಗೂ ಯಾದಗಿರಿಯಲ್ಲಿ 10 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಒಂದು ವರ್ಷದಲ್ಲಿ 11 ಬಾರಿ ಕೊರೊನಾ ಲಸಿಕೆ ಪಡೆದ ವೃದ್ಧನ ವಿರುದ್ಧ FIR
ಸಚಿವ ಅಶೋಕ್ ಬೆನ್ನಲ್ಲೇ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್‍ಗೆ ಕೊರೊನಾ ಬಂದಿದೆ. ಶಿವಮೊಗ್ಗದಲ್ಲಿ ಸೋಂಕಿತ ಓಂ ಶಕ್ತಿ ಭಕ್ತರ ಸಂಖ್ಯೆ 66ಕ್ಕೇರಿದೆ. ದಾವಣಗೆರೆಯಲ್ಲಿ ನಾಲ್ವರು ಓಂ ಶಕ್ತಿ ಭಕ್ತರಿಗೆ ಸೋಂಕು ತಗುಲಿದೆ. ಹಾಸನದಲ್ಲಿ 23 ಪೊಲೀಸರು ಕೊರೋನಾ ಪಾಸಿಟೀವ್ ಆಗಿದ್ದಾರೆ. ರಾಜ್ಯದಲ್ಲಿಂದು ನಾಲ್ವರು ಬಲಿ ಆಗಿದ್ದಾರೆ. ಈ ಮಧ್ಯೆ ಕೋವಿಡ್ ಮರಣಗಳ ಲೆಕ್ಕದಲ್ಲಿ ಸರ್ಕಾರ ಕಳ್ಳಾಟ ಆಡ್ತಿರೋದು ಬಯಲಾಗ್ತಿದೆ. ಕಳೆದ ವರ್ಷ ಸಂಭವಿಸಿದ ಸಾವುಗಳನ್ನು ಕೊರೊನಾ ಹೆಲ್ತ್ ಬುಲೆಟಿನಲ್ಲಿ ಉಲ್ಲೇಖಿಸಿದ್ದಾರೆ.
ಜನವರಿ 1ರಿಂದ ನಿನ್ನೆವರೆಗೆ 31 ಮಂದಿ ಸೋಂಕಿಗೆ ಬಲಿ ಆಗಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದರಲ್ಲಿ 7ಕ್ಕೂ ಹೆಚ್ಚು ಮಂದಿ ಕಳೆದ ವರ್ಷವೇ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಮಿಕ್ರಾನ್ ಕೇಸ್‍ಗಳ ಸಂಖ್ಯೆ 441ಕ್ಕೆ ಹೆಚ್ಚಿದೆ. ನಿನ್ನೆ ಒಂದೇ ದಿನ 108 ಆಫ್ರಿಕಾ ವೈರಸ್ ಕೇಸ್ ಬೆಳಕಿಗೆ ಬಂದಿವೆ. ಸದ್ಯ ದೇಶದಲ್ಲಿ 3600ಕ್ಕೂ ಹೆಚ್ಚು ಇವೆ. ಇದನ್ನೂ ಓದಿ: ದೇಶದಲ್ಲಿ ಒಂದೇ ದಿನದಲ್ಲಿ 1.59 ಲಕ್ಷ ಕೋವಿಡ್ ಪ್ರಕರಣ – ನಿನ್ನೆಗಿಂತ ಶೇ.12.4 ಹೆಚ್ಚಳ!