Latest

ಒಂದು ವರ್ಷದಲ್ಲಿ 11 ಬಾರಿ ಕೊರೊನಾ ಲಸಿಕೆ ಪಡೆದ ವೃದ್ಧನ ವಿರುದ್ಧ FIR

ಪಾಟ್ನಾ: ಕಳೆದ ಒಂದು ವರ್ಷದಲ್ಲಿ 11 ಬಾರಿ ಕೋವಿಡ್-19 ಲಸಿಕೆಯನ್ನು ಪಡೆದುಕೊಂಡ ವೃದ್ಧನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬಿಹಾರದ ಮಾಧೇಪುರ ಜಿಲ್ಲೆಯ ನಿವಾಸಿ ಬ್ರಹ್ಮದೇವ್ ಮಂಡಲ್ ವಿರುದ್ಧ ಪುರೈನಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅಸಹಕಾರ), 419 (ವ್ಯಕ್ತಿತ್ವದಿಂದ ವಂಚನೆ), ಮತ್ತು 420 (ವಂಚನೆ) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ವಾರದ ಆರಂಭದಲ್ಲಿ ಹನ್ನೆರಡನೇ ಬಾರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಬ್ರಹ್ಮದೇವ್ ಮಂಡಲ್ ಅವರು ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ನಂತರ ತನಿಖೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡ ಬ್ರಹ್ಮದೇವ್ ಮಂಡಲ್ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಬಳಸಿ 11 ಬಾರಿ ಲಸಿಕೆ ಪಡೆದುಕೊಂಡಿರುವ ವಿಚಾರ ಬಹಿರಂಗಪಡಿಸಿದ್ದಾರೆ. ಅಲ್ಲದೇ 11 ಬಾರಿ ಲಸಿಕೆ ಸ್ವೀಕರಿಸಿದ್ದರಿಂದ ತಾನು ಹೊಂದಿದ್ದ ಕಾಯಿಲೆಗಳಿಂದ ಗುಣಮುಖರಾಗಿರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

ಬ್ರಹ್ಮದೇವ್ ಮಂಡಲ್ ಅವರು ಅಂಚೆ ಇಲಾಖೆಯ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಕಳೆದ ಒಂದು ವರ್ಷದಲ್ಲಿ 11 ಬಾರಿ ಕೋವಿಡ್ -19 ಲಸಿಕೆಯನ್ನು ತೆಗೆದುಕೊಂಡ ರೀತಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಬ್ರಹ್ಮದೇವ್ ಅವರನ್ನು ಬಂಧಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಆದರೆ ವಯಸ್ಸಾಗಿರುವ ಕಾರಣ ಬ್ರಹ್ಮದೇವ್ ಜಾಮೀನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ

Leave a Reply

Your email address will not be published.

Back to top button