ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,59,632 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ ಪ್ರಕರಣಗಳಿಗಿಂತ ಶೇ.12.4 ರಷ್ಟು ಹೆಚ್ಚಾಗಿದೆ ಎಂದು ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ವರದಿ ತಿಳಿಸಿದೆ.
ಅತೀ ಹೆಚ್ಚು ಕೋವಿಡ್ ಕೇಸ್‌ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. 41,434 ಕೇಸ್‌ಗಳು ಮಹಾರಾಷ್ಟ್ರದಲ್ಲಿ, ದೆಹಲಿ – 20,181, ಪಶ್ಚಿಮ ಬಂಗಾಳ – 18,802, ತಮಿಳುನಾಡು – 10,978, ಕರ್ನಾಟಕ – 8,906 ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ದಾಖಲಾದ ಪ್ರಕರಣಗಳಲ್ಲಿ ಶೇ.62 ರಷ್ಟು ಪಾಲನ್ನು ಈ 5 ರಾಜ್ಯಗಳೇ ಹೊಂದಿದೆ. ಇದನ್ನೂ ಓದಿ: ರಾಜ್ಯದ ಕೋವಿಡ್ ವಾರ್ ರೂಮ್ಗೆ ರಾಷ್ಟ್ರ ಪ್ರಶಸ್ತಿ
Advertisement
Advertisement
1,59,632 ಹೊಸ ಪ್ರಕರಣಗಳು ವರದಿಯಾಗಿವೆ. 3,623 ಕೊರೊನಾ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿವೆ. ಹೀಗೆ ದೇಶದಲ್ಲಿ 5,90,611 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Advertisement
ಇಲ್ಲಿಯವರೆಗೆ ದೇಶದಲ್ಲಿ 3,55,28,004 ಕೊರೊನಾ ಕೇಸ್‌ಗಳು ವರದಿಯಾಗಿವೆ. ಇವುಗಳಲ್ಲಿ 3,44,53,603 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 40,863 ರೋಗಿಗಳು ಚೇತರಿಸಿಕೊಂಡಿದ್ದು, ಈ ಪ್ರಮಾಣ ಶೇ96.98 ಇದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ತೆರಳಲು ಬಸ್ ಸಮಸ್ಯೆ – ನಿಲ್ದಾಣದಲ್ಲೇ ಕಣ್ಣೀರಿಟ್ಟ ಮಹಿಳೆ
Advertisement
ಕಳೆದ 24 ಗಂಟೆಗಳಲ್ಲಿ 327 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು ಸಾವಿನ ಪ್ರಕರಣಗಳು 4,83,790ಕ್ಕೆ ಏರಿವೆ.