ಚಂಡೀಗಢ: 12 ವರ್ಷದ ಪೋರ ಹರಿಯಾಣದಲ್ಲಿ ಮೂರು ಆ್ಯಪ್‍ಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾನೆ.
ಝಜ್ಜರ್‌ನ ಜವಾಹರ್ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್ ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕೆಯ ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ
Advertisement
Advertisement
ಕಾರ್ತಿಕೇಯ ಈ ಕುರಿತು ಮಾತನಾಡಿದ್ದು, ನನ್ನ ತಂದೆ ಅಜಿತ್ ಸಿಂಗ್ ಅವರು ರೈತರಾಗಿದ್ದರು. ಕೋವಿಡ್ ಸಮಯದಲ್ಲಿ ಆನ್‍ಲೈನ್ ತರಗತಿಗಳಿಗೆ ಸುಮಾರು 10,000 ರೂ. ವೆಚ್ಚದ ಮೊಬೈಲ್ ಫೋನ್ ಖರೀದಿಸಿ ಮಹನಿಗೆ ಕೊಟ್ಟಿದ್ದರು. ಆದರೆ ಫೋನ್‍ನಲ್ಲಿ ಕೆಲವು ಕೋಡಿಂಗ್ ಸಮಸ್ಯೆ ಇತ್ತು. ಈ ಹಿನ್ನೆಲೆ ಯೂ ಟ್ಯೂಬ್ ನೋಡಿ ನಾನು ಫೋನ್ ಸಮಸ್ಯೆಯನ್ನು ನಿಭಾಯಿಸಿದ್ದಾನೆ ಎಂದು ತಿಳಿಸಿದ್ದಾನೆ.
Advertisement
Advertisement
ಈ ಹಿನ್ನೆಲೆ ನಾನು ನನ್ನ ಅಧ್ಯಯನವನ್ನು ಮುಂದುವರಿಸಿದೆ. ನಿರತರ ಅಧ್ಯಯನದಿಂದ ನಾನು ಮೂರು ಅಪ್ಲಿಕೇಶನ್‍ಗಳನ್ನು ಸಿದ್ಧಪಡಿಸಿದ್ದೇನೆ. ಮೊದಲ ಅಪ್ಲಿಕೇಶನ್ ಲುಸೆಂಟ್ ಜಿ.ಕೆ ಎಂಬ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದೆ. ಎರಡನೇ ಅಪ್ಲಿಕೇಶನ್ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್ ಆಗಿದ್ದು, ಅದು ಕೋಡಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿಸುತ್ತದೆ. ಮೂರನೇ ಅಪ್ಲಿಕೇಶನ್ ಡಿಜಿಟಲ್ ಶಿಕ್ಷಣ ಕುರಿತು ಇದೆ ಎಂದು ವಿವರಿಸಿದ್ದಾನೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ
ಈ ಅಪ್ಲಿಕೇಶನ್‍ಗಳು 45,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಿದ್ದರಿಂದ ನನಗೆ ಪ್ರೇರಣೆ ಸಿಕ್ಕಿದೆ. ನಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.