ರಾಮನಗರ: ರಸ್ತೆಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ದಾಖಲಿಸದೇ ಅಪಘಾತದ (Accident) ಸ್ಥಳದಲ್ಲೇ ಬಿಟ್ಟುಹೋಗಿ 108 ಅಂಬುಲೆನ್ಸ್ (108 Ambulance) ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
Advertisement
ಗ್ರಾಮದ ಬಳಿ ಬೈಕ್‍ನಲ್ಲಿ (Bike) ಬರುವಾಗ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಾಯಾಗೊಂಡಿದ್ದ ಇದನ್ನು ಗಮನಿಸಿದ ತಿಟ್ಟಮಾರನಹಳ್ಳಿ ಗ್ರಾಮಸ್ಥರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ಸಿಬ್ಬಂದಿ ಗಾಯಾಳುವನ್ನು ಅಂಬುಲೆನ್ಸ್‌ನಲ್ಲಿ ಮಲಗಿಸಿ ಜೊತೆಯಲ್ಲಿ ಯಾರಾದರೂ ಬರುವಂತೆ ಒತ್ತಾಯಿಸಿದ್ದಾರೆ. ರೋಗಿಯ ಜೊತೆ ತಡರಾತ್ರಿ ಯಾರೂ ಹೋಗದ ಕಾರಣ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಸ್ಥಳದಲ್ಲೇ ಇಳಿಸಿ ವಾಪಸ್ ಹೋಗಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ!
Advertisement
Advertisement
ಅಂಬುಲೆನ್ಸ್ ಸಿಬ್ಬಂದಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೆಸಿಬಿಗೆ (JCB) ಡೀಸೆಲ್ ತರಲು ಬಂದಿದ್ದ ವ್ಯಕ್ತಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಅಂಬುಲೆನ್ಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸದೇ ನಿರ್ಲಕ್ಷ್ಯವಹಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸ್ಥಳಕ್ಕೆ ಬಂದ ಜೆಸಿಬಿ ಮಾಲೀಕ ಖಾಸಗಿ ವಾಹನದ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ