ಬೆಂಗಳೂರು: ರಾಜ್ಯದಲ್ಲಿ 108 ಸೇವೆಯಲ್ಲಿನ ಸಮಸ್ಯೆ ಮುಗಿಯೋ ತರ ಕಾಣುತ್ತಿಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಲು ಸತಾಯಿಸುತ್ತಿರುವ ಜಿವಿಕೆ (GVK) ಸಂಸ್ಥೆಗೆ ಆರೋಗ್ಯ ಇಲಾಖೆ ಇಂದು ಮತ್ತೆ ನೋಟಿಸ್ ಜಾರಿ ಮಾಡಿದೆ.
Advertisement
ನಾಳೆ ಸಂಜೆಯೊಳಗೆ ಸಿಬ್ಬಂದಿಗೆ ಸಂಬಳ ನೀಡದಿದ್ರೆ, ಸಂಸ್ಥೆಯನ್ನು ಬ್ಲಾಕ್ ಲಿಸ್ಟ್‌ಗೆ ಹಾಕಬೇಕಾಗುತ್ತೆ ಅಂತ ಎಚ್ಚರಿಕೆಯನ್ನೂ ನೀಡಿದೆ. ಮತ್ತೊಂದು ಕಡೆ ನಾಳೆ ಸಂಜೆಯೊಳಗೆ ಸಂಬಳ ನೀಡದಿದ್ದರೆ ಅಂಬುಲೆನ್ಸ್ (Ambulance) ಸೇವೆ ಸ್ಥಗಿತಗೊಳಿಸಬೇಕಾಗುತ್ತೆ ಅಂತ ಜಿವಿಕೆ ಸಂಸ್ಥೆಗೆ 108 ಅಂಬುಲೆನ್ಸ್ ಚಾಲಕರು ಸಹ ಗಡುವು ನೀಡಿದ್ದಾರೆ. ಇದನ್ನೂ ಓದಿ: ಜಿ-20 ಅಧ್ಯಕ್ಷ ಸ್ಥಾನ ಹಸ್ತಾಂತರ – ಭಾರತಲ್ಲಿ ಎಲ್ಲಿ, ಯಾವಾಗ ನಡೆಯುತ್ತೆ?
Advertisement
Advertisement
ಈಗಾಗಲೇ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆ ಬಳಿ ಅಂಬುಲೆನ್ಸ್ ನಿಂತಲ್ಲೆ ನಿಂತಿವೆ. ಕೆಲವೆಡೆ ಚಾಲಕರು ಮತ್ತು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿಲ್ಲ. ಗುರುವಾರ ಸಂಜೆಯೊಳಗೆ ನಮಗೆ ವೇತನ ಬಿಡುಗಡೆ ಮಾಡಬೇಕು, ಒಂದು ವೇಳೆ ವೇತನ ಸಿಗದಿದ್ದರೆ ರಾಜ್ಯಾದ್ಯಂತ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಇದರಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆಯೆ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ