ಭೋಪಾಲ್: 100 ವರ್ಷದ ವೃದ್ಧೆಯೊಬ್ಬರು ತನ್ನ ಸುಮಾರು 15 ಎಕರೆ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಹೆಸರಿಗೆ ಬರೆದುಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಅಜ್ಜಿಯನ್ನು ಮಂಗಿ ಬಾಯ್ ತನ್ವಾರ್ (Mangi Bai Tanwar) ಎಂದು ಗುರುತಿಸಲಾಗಿದೆ. ಇವರು ರಾಜ್‍ಘರ್ ಜಿಲ್ಲೆಯಿಂದ 65 ಕಿ.ಮೀ ದೂರದಲ್ಲಿರುವ ಜಾಗಿರ್ ಗ್ರಾಮದ ಹರಿಪುರ ನಿವಾಸಿ. ಸದ್ಯ ಅಜ್ಜಿ ಘೋಷಣೆ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ವೀಡಿಯೋದಲ್ಲೇನಿದೆ..?: ನೆರೆಹೊರೆಯವರ ಜೊತೆ ಕುಳಿತಿರುವ ಅಜ್ಜಿಯು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ದೇಶಕ್ಕೆ ನರೇಂದ್ರ ಮೋದಿಯಿಂದ ಒಳ್ಳೆಯದಾಗಿದ್ದು, ಅವರು ಒಳ್ಳೊಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಅವರು ವಯಸ್ಸಾದವರಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಮಂಗಿ ಬಾಯ್‍ಗೆ 14 ಮಂದಿ ಮಕ್ಕಳಿದ್ದಾರೆ. ಈ ಮಧ್ಯೆ ಮೋದಿ ಕೂಡ ನನ್ನ ಮಗನಂತೆಯೇ. ಹೀಗಾಗಿ ನನ್ನ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿಗೆ ಅಜ್ಜಿ ಶುಭವನ್ನು ಕೂಡ ಹಾರೈಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ನಾನು ತೀರ್ಥಯಾತ್ರೆಗೆ ಹೊರಟಿದ್ದ ಸಂದರ್ಭದಲ್ಲಿ ಮೋದಿಯವರು ನಮಗೆ ಉಳಿದುಕೊಳ್ಳಲು ಮನೆ, ಆಹಾರ ಹಾಗೂ ಹಣವನ್ನು ನೀಡುವ ಮೂಲಕ ತಮ್ಮ ಮನೆಯವರಂತೆಯೇ ಅತ್ಯಂತ ಪ್ರೀತಿಯಿಂದ ಯಾವುದೇ ತೊಂದರೆಯಾಗಂದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ನನ್ನದೇ ಮಗ ಎಂದುಕೊಂಡು ನನ್ನ ಜಮೀನು ಬರೆದುಕೊಡುವುದಾಗಿ ತಿಳಿಸಿದರು.