ತುಮಕೂರು: ಅಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ (Fire Accident) ತಗುಲಿ 100 ಕುರಿ, 200 ಕೋಳಿ ಹಾಗೂ 6 ಹಸುಗಳು ಸಾವಿಗೀಡಾದ ದುರ್ಘಟನೆ ಚಿಕ್ಕನಾಯಕನಹಳ್ಳಿಯ (Chikkanayakana Halli) ಹಂದನಕೆರೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ 7:30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವ್ಯಾಪಿಸಿದ ಬೆಂಕಿಯಿಂದ ಸಾಕು ಪ್ರಾಣಿಗಳು ಸಾವಿಗೀಡಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾದ ಹಸು, ಕುರಿ ಹಾಗೂ ಕೋಳಿಗಳ ಕಳೆಬರಹಗಳು ಮನಕಲುಕುವಂತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ
- Advertisement -
- Advertisement -
ಘಟನೆಯಿಂದ ಆಘಾತಗೊಂಡ ರೈತ ಚೇತನ್ ಕುಮಾರ್ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಳಿಗೂ ಹೆಚ್ಚಿನ ನಷ್ಟ ಸಂಭವಿಸಿದೆ. ಘಟನೆ ನಡೆದು 12 ಗಂಟೆಗಳು ಕಳೆದರೂ ರೈತನ ನೆರವಿಗೆ ಬರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ