ಬೆಂಗಳೂರು: ಕೆರೆಯಿಂದ ಪ್ರತಿನಿತ್ಯ ಮಣ್ಣು ಸಾಗಿಸುತ್ತಿರುವುದರಿಂದ ಅತ್ತಿಬೆಲೆ – ಅನೆಕಲ್ (Anekal) ಮುಖ್ಯ ರಸ್ತೆ ಹಾಳಾಗುತ್ತಿದೆ ಎಂದು ಕರ್ಪೂರು ಗ್ರಾಮದ ಜನರು ಮಣ್ಣು ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ಪೂರು ಗ್ರಾಮದ ಕೆರೆಯಿಂದ (Lake) ರಸ್ತೆ ಅಭಿವೃದ್ಧಿಗೆ ಎಸ್‍ಎಸ್‍ಸಿ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಗುತ್ತಿಗೆದಾರ ಮಣ್ಣು ಸಾಗಿಸುತ್ತಿದ್ದು, ಲಾರಿ ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ರಸ್ತೆ ಹಾಳಾಗುತ್ತಿದೆ. ಅಲ್ಲದೇ ಅನುಮತಿಗಿಂತ ಹೆಚ್ಚಿನ ಮಣ್ಣು ತೆಗೆಯುತ್ತಿರುವುದರಿಂದ ಕೆರೆ ಸೇರಿದಂತೆ ಗ್ರಾಮದ ಪರಿಸರ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಶಿವರಾಜ್‌ಸಿಂಗ್ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?
Advertisement
Advertisement
ಸಾವಿರಾರು ಲೋಡ್‍ಗಳಷ್ಟು ಮಣ್ಣನ್ನು ಸಾಗಿಸಲಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಲಾರಿಗಳನ್ನು ತಡೆದು ಗ್ರಾಮದ ಕೆರೆಯ ಬಳಿಯೇ ನಿಲ್ಲಿಸಿದ್ದಾರೆ. ಇದನ್ನೂ ಓದಿ: SSLC, PUCಗೆ 3 ಪಬ್ಲಿಕ್ ಪರೀಕ್ಷೆ ಇರುತ್ತೆ – ಸಚಿವ ಮಧು ಬಂಗಾರಪ್ಪ