ಪಾಟ್ನಾ: 100ಕ್ಕೂ ಹೆಚ್ಚು ಮಕ್ಕಳು ಬಿಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಷಪೂರಿತ ಆಹಾರ ತಿಂದು ಅಸ್ವಸ್ಥರಾಗಿದ್ದಾರೆ.
ಬಿಹಾರ ಸಂಸ್ಥಾಪನಾ ದಿನವಾದ ಹಿನ್ನೆಲೆ ಬಿಹಾರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದ ಮಕ್ಕಳು ಅಲ್ಲಿ ಕೊಟ್ಟಿದ್ದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಸುಮಾರು 15 ಮಕ್ಕಳು ಚಿಕಿತ್ಸೆಗಾಗಿ ಪಿಎಂಸಿಎಚ್‍ಗೆ ದಾಖಲಾಗಿದ್ದು, ಇತರ ಮಕ್ಕಳಿಗೆ ಗಾಂಧಿ ಮೈದಾನದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯಿಂದ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮದಲ್ಲಿ ತಯಾರಿಸಿದ ಆಹಾರ ತಿಂದು ಈ ದುರ್ಘಟನೆಗೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್
ಮಕ್ಕಳ ಸ್ಥಿತಿ ಚಿಂತಜನಕ
ಬಿಹಾರ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಹಲವು ಜಿಲ್ಲೆಗಳಿಂದ ಮಕ್ಕಳು ಆಗಮಿಸಿದ್ದಾರೆ. ಈ ವೇಳೆ ಅಲ್ಲಿ ತಿಂದ ಆಹಾರದಿಂದ ಹೊಟ್ಟೆ ನೋವು ಶುರುವಾಗಿದ್ದು, ಮಕ್ಕಳು ಅಸ್ವಸ್ತಗೊಂಡಿದ್ದಾರೆ. ಈ ಪ್ರಕರಣಗಳು ಸ್ಥಳದಲ್ಲಿ ಹೆಚ್ಚುತ್ತಲೇ ಇತ್ತು. ಇದಾದ ಬಳಿಕ ಗಾಂಧಿ ಮೈದಾನದ ಶಿಬಿರದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾರಂಭಿಸಿದರು. ಆದರೆ ಈ ವೇಳೆ ಮಕ್ಕಳ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ 15 ಮಕ್ಕಳನ್ನು ಪಿಎಂಸಿಎಚ್ ಗೆ ಕರೆದೊಯ್ಯಲಾಯಿತು. ಸೀತಾಮರ್ಹಿಯ ಬಾಲಕಿಯೊಬ್ಬಳ ಪರಿಸ್ಥಿತಿ ತುಂಬಾ ಚಿಂತಜನಕವಾಗಿದ್ದು, ಆಕೆಯನ್ನು ತುರ್ತು ಚಿಕಿತ್ಸೆಗೆ ದಾಖಲಾಯಿತು. ಉಳಿದ ಮಕ್ಕಳಿಗೆ ಒಪಿಡಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳ ಸ್ಥಿತಿ ಸುಧಾರಿಸುತ್ತಿದೆ
ಅಸ್ವಸ್ಥಗೊಂಡಿರುವ ಮಕ್ಕಳಲ್ಲಿ ಏಳು ಮಕ್ಕಳು ಸೀತಾಮರ್ಹಿ, ಮೂವರು ಔರಂಗಾಬಾದ್ ಮತ್ತು ಒಬ್ಬರು ಕತಿಹಾರ್‍ನಿಂದ ಬಂದವರು. ಬುಧವಾರವೇ ಹಲವು ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಕ್ಕಳ ಆರೋಗ್ಯ ತೀವ್ರಗತಿಯಲ್ಲಿ ಸುಧಾರಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪಿಎಂಸಿಎಚ್ ಅಧೀಕ್ಷಕ ಡಾ.ಐ.ಎಸ್.ಠಾಕೂರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ
ಮತ್ತೊಂದೆಡೆ, ಆರೋಗ್ಯ ಇಲಾಖೆಯ ಸಂಪೂರ್ಣ ತಂಡವು ಗಾಂಧಿ ಮೈದಾನದಲ್ಲಿ ಚಿಕಿತ್ಸಾ ಕಾರ್ಯದಲ್ಲಿ ತೊಡಗಿದೆ ಎಂದು ಸಿವಿಲ್ ಸರ್ಜನ್ ವಿಭಾ ಕುಮಾರಿ ಸಿಂಗ್ ಹೇಳಿದ್ದಾರೆ. ವಿಷಪುರಿತ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿರಬಹುದು. ಮಕ್ಕಳಿಗೆ ಹಾಳಾದ ಆಹಾರವನ್ನು ನೀಡಿದ ನಂತರ, ಆಹಾರ ಸುರಕ್ಷತಾ ಅಧಿಕಾರಿ ಅಜಯ್ ಕುಮಾರ್ ಅವರು ಗಾಂಧಿ ಮೈದಾನಕ್ಕೆ ಹೋಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.