ಬೆಂಗಳೂರು: ಕೆಲ ದಿನಗಳ ಹಿಂದೆ ಹೈ ಟೆನ್ಷನ್ ವೈಯರ್ (High Tension Wire) ನಿಂದಾಗಿ 11 ವರ್ಷದ ಬಾಲಕ ಸಾವನ್ನಪ್ಪಿದ್ದ. ಆ ಬಳಿಕ ಬೆಸ್ಕಾಂ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಗರದ ಅನಧಿಕೃತ ಕಟ್ಟಡ ಮಾಲೀಕರಿಗೆ ಠಕ್ಕರ್ ಕೊಡಲು ಬಿಬಿಎಂಪಿ (BBMP) ಸಜ್ಜಾಗಿದೆ. ಮತ್ತೆ ಈ ರೀತಿಯ ಅನಾಹುತ ಆಗದಂತೆ ತಡೆಯಲು ದೊಡ್ಡ ಸ್ಟ್ರೈಕ್ ಮಾಡಲು ಸಿದ್ಧವಾಗಿದೆ.
ಹೈಟೆನ್ಷನ್ ವೈಯರ್‍ನಿಂದಾಗಿ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ನಂತರ ಬೆಸ್ಕಾಂ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಹೈ ಟೆನ್ಷನ್ ವೈರ್ ಹಾದು ಹೋಗಿರುವ 10 ಸಾವಿರ ಮನೆಗಳು ನಗರದಲ್ಲಿದೆ ಎಂದು ಬೆಸ್ಕಾಂನಿಂದ ಬಿಬಿಎಂಪಿಗೆ ಮಾಹಿತಿ ನೀಡಲಾಗಿದ್ಯಂತೆ. ಕೂಡಲೇ ನೋಟಿಸ್ ಕೊಟ್ಟು ತೆರವು ಮಾಡಿ ಅಂತ ಬೆಸ್ಕಾಂನಿಂದ ಬಿಬಿಎಂಪಿಗೆ ಮನವಿ ಬಂದಿರುವ ಹಿನ್ನೆಲೆ ನೋಟಿಸ್ ನೀಡಲು ಬಿಬಿಎಂಪಿ ಮುಂದಾಗಿದೆ.
ಹೈ ಟೆನ್ಷನ್ ವೈಯರ್ ಹಾದು ಹೋಗುವ ಭಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಆರೋಪ ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆ ಬೆಸ್ಕಾಂ ಈಗ ಹೈಟೆನ್ಷನ್ ವೈರ್ ಕೆಳಗೆ ಕಟ್ಟಿರುವ ಮನೆಗಳ ಲೆಕ್ಕ ಹಾಕಿದ್ಯಂತೆ. ಬೆಸ್ಕಾಂ ಪ್ರಕಾರ ಹೈಟೆನ್ಷನ್ ವೈಯರ್ ಹಾದು ಹೋಗುವ ಜಾಗದಲ್ಲಿ 10 ಸಾವಿರ ಮನೆಗಳಿವೆಯಂತೆ. ಇವೆಲ್ಲವನ್ನೂ ತೆರವು ಮಾಡಲು ಬಿಬಿಎಂಪಿಗೆ ಬೆಸ್ಕಾಂ ಮನವಿ ಮಾಡಿದೆ. ಬಿ ಖಾತಾ ಸೈಟ್‍ನಲ್ಲಿ ಗ್ರೌಂಡ್ ಪ್ಲಸ್ ಎರಡು ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶ. ಆದರೆ ನಗರದ ಹಲವೆಡೆ ಅದಕ್ಕೂ ಮೀರಿ ಅಂತಸ್ತು ಕಟ್ಟಿಕೊಳ್ಳಲಾಗಿದೆ. ಯಾರು ಬಿಬಿಎಂಪಿ ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿದ್ದಾರೋ ಅಂತಹವರಿಗೆ ನೋಟೀಸ್ ನೀಡಲು ಪಾಲಿಕೆ ನಿರ್ಧಾರ ಮಾಡಿದೆ.
ಬೆಸ್ಕಾಂ ಲೆಕ್ಕದ ಪ್ರಕಾರ 10 ಸಾವಿರ ಮನೆಗಳ ಸರ್ವೇ, ದಾಖಲೆ ಪರಿಶೀಲನೆಗೆ ಬಿಬಿಎಂಪಿ ಮುಂದಾಗುತ್ತಿದೆ. ಈ ಸಂಬಂಧ ಎಲ್ಲಾ ವಲಯ ಚೀಫ್ ಇಂಜಿನಿಯರ್‍ಗಳಿಗೆ ಪಾಲಿಕೆಯಿಂದ ಉಸ್ತುವಾರಿ ನೀಡಿ ತ್ವರಿತಗತಿಯಲ್ಲಿ ಬೆಸ್ಕಾಂ ಪಟ್ಟಿ ಸರ್ವೇ ಮಾಡಿ ಮಾಹಿತಿ ದಾಖಲಿಸುವಂತೆ ಪಾಲಿಕೆ ಇಂಜಿನಿಯರ್ ಗಳಿಗೆ ತಾಕೀತು ಮಾಡಿದೆ. ಇದನ್ನೂ ಓದಿ: ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಪ್ರಯತ್ನಿಸ್ತಿದ್ದಾರೆ: ಕಣ್ಣೀರಿಟ್ಟ ಶಾಸಕ ಹೆಚ್.ಕೆ ಕುಮಾರಸ್ವಾಮಿ
ಜನರು ಕಾನೂನು ಮೀರಿ ಹೆಚ್ಚುವರಿ ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಿರೋದ್ರಿಂದ ಅವಘಡ ಆಗುತ್ತಿದೆ. ಹೀಗಾಗಿ ಆ ರೀತಿಯ ಕಟ್ಟಡಗಳನ್ನ ತೆರವು ಮಾಡಿ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿ ಅಂತ ಬೆಸ್ಕಾಂ ಮನವಿಗೆ ನಿಜಕ್ಕೂ ಬಿಬಿಎಂಪಿ ಕಾರ್ಯಪ್ರವೃತ್ತವಾಗಿ ಕ್ರಮ ಕೈಗೊಳ್ಳುತ್ತಾ..? ಅಥವಾ ಈ ಬಿಸಿ ತಣ್ಣಗಾದ ನಂತರ ಸುಮ್ಮನಾಗುತ್ತಾರಾ ಕಾದುನೋಡಬೇಕು..
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k