– ಸಂಸದರಾಗಿ ನೀವೇನು ಮಾಡಿದ್ದೀರಿ ಅನ್ನೋದನ್ನ ಹೇಳಿ
ಮೈಸೂರು: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಹೇಳುವುದು ತಪ್ಪು ಎಂದು ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರನ್ನ ಎಂಎಲ್‍ಸಿ ಹೆಚ್.ವಿಶ್ವನಾಥ್ ಕುಟುಕಿದ್ದಾರೆ. ಬೆಂಗಳೂರು-ಮೈಸೂರ ದಶಪಥದ ರಸ್ತೆಗೆ ಈ ಹಿಂದೆಯೇ ಚಾಲನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈ ಹಿಂದೆ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದಾಗ ಸುಮಾರು ಸಭೆಗಳನ್ನು ನಡೆಸಿ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಬಗ್ಗೆ ತೀರ್ಮಾನವಾಯ್ತು. ಧೃವ ನಾರಾಯಣ್, ರಮ್ಯಾ, ಡಿ.ಕೆ.ಸುರೇಶ್ ಸೇರಿದಂತೆ ನಾವೆಲ್ಲರೂ ಸುಮಾರು ಸಭೆಗಳಲ್ಲಿ ಭಾಗಿಯಾಗಿದ್ದೇವೆ. ಆನಂತರ ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಎನ್‍ಡಿಎ ಅಧಿಕಾರಕ್ಕೆ ಬಂತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ಮಹದೇವ ಪ್ರಸಾದ್ ಹೆದ್ದಾರಿ ನಿರ್ಮಾಣದ ಕೆಲಸ ಆರಂಭಿಸಿದ್ದರು.
Advertisement
Advertisement
ಹೊಸದಾಗಿ ಬಂದವರು ನಾನು ಈ ಯೋಜನೆ ತಂದೆ ಅಂತ ಹೇಳೋದು ಸರಿಯಲ್ಲ. ನೀವು ಸಂಸದರಾಗಿ ಏನು ಮಾಡಿದ್ದೀರಿ ಅದನ್ನ ಜನರ ಮುಂದೆ ಹೇಳಿ. ಅದನ್ನು ಬಿಟ್ಟು, ನಾನೇ ಎಲ್ಲ ಮಾಡಿದೆ ಅಂತ ಹೇಳುವುದು ತಪ್ಪು. ಕೆಲ ದಿನಗಳ ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಸಹ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋದು ಗಮನಿಸಿದ್ದೇನೆ ಎಂದರು.
Advertisement
Advertisement
ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಮಡಿಕೇರಿ ಮತ್ತು ಮಡಿಕೇರಿಯಿಂದ ಮಂಗಳೂರು ರಸ್ತೆಗಳ ಬಗ್ಗೆ ಆ ಕಾಲದಲ್ಲಿಯೇ ತೀರ್ಮಾನಗೊಂಡು ಕೆಲಸಗಳು ಪ್ರಾರಂಭವಾಯ್ತು. ಹಾಗಾಗಿ ಅನಾವಶ್ಯಕವಾಗಿ ನಾನೇ ಮಾಡಿದೆ, ನಾನೇ ಕಟ್ಟಿದೆ ಎಂದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಪ್ರತಾಪ್ ಸಿಂಹ ವಿರುದ್ಧ ಸುಮಲತಾ
ಪ್ರತಾಪ್ ಸಿಂಹ ಹೇಳಿದ್ದೇನು?:
ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಂದಿರುವುದು ಮೈಸೂರಿಗೋಸ್ಕರ ಮಾತ್ರ. ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಮಂಡ್ಯದ ಮೇಲೆ ಹೋಗುತ್ತೆ ಅಂತಾ ಮಂಡ್ಯದವರು, ರಾಮನಗರದ ಮೇಲೆ ಹೋಗುತ್ತೆ ಅಂತಾ ರಾಮನಗರದವರು. ಈ ಕಾಮಗಾರಿ ನನ್ನದು ಅಂತಾ ಹೇಳಿಕೊಂಡರೇ ಅದಕ್ಕೆ ಅರ್ಥ ಇದೆಯಾ? ಎಂದು ಪ್ರಶ್ನಿಸಿದ ಅವರು ಇದು ಮೋದಿ ಸರ್ಕಾರದ ಯೋಜನೆ. ಈ ಯೋಜನೆಗೆ ಕಾಂಗ್ರೆಸ್ ನವರಿಂದ ಬಿಡಿಗಾಸು ಕೂಡ ಸಿಕ್ಕಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ