ಢಾಕಾ: ಬಾಂಗ್ಲಾದೇಶದ (Bangladesh) ಆಗ್ನೇಯ ಭಾಗದಲ್ಲಿರುವ ಕಡಲತೀರದ ರೆಸಾರ್ಟ್ ಒಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಕಾಕ್ಸ್ ಬಜಾರ್ ಜಿಲ್ಲೆಯ ಇನಾನಿಯಲ್ಲಿರುವ ‘ತುಪ್ತುಪ್ ರೆಸ್ಟೋ & ರೆಸಾರ್ಟ್’ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಜಿಲ್ಲೆಯ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ವಿಭಾಗದ ಉಪ ಸಹಾಯಕ ನಿರ್ದೇಶಕ ಸೈಯದ್ ಮೊಹಮ್ಮದ್ ಮೊರ್ಷೆದ್ ಹೊಸೈನ್ ತಿಳಿಸಿದ್ದಾರೆ. ಈ ರೆಸಾರ್ಟ್ ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಇದನ್ನೂ ಓದಿ: Pakistan | ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳ ದುರಂತ ಅಂತ್ಯ – ಶಿಕ್ಷಕಿಯೂ ಸಾವು
ಬೆಳಗ್ಗೆ ಬೆಂಕಿ ಕಾಣಿಸಿಕೊಂಡು, ಮೂರು ಅಂತಸ್ತಿನ ಮರದ ರೆಸಾರ್ಟ್ನಾದ್ಯಂತ ವೇಗವಾಗಿ ಹರಡಿಕೊಂಡಿತು. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ ಎಂದು ಹೊಸೈನ್ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಸಹೋದ್ಯೋಗಿಯೊಂದಿಗೆ ಡೇಟ್ ಮಾಡಿದ್ದಕ್ಕೆ ಪತ್ನಿ ಕೊಲೆ – ಅಮೆರಿಕದಲ್ಲಿ ಗುಜರಾತ್ ಮೂಲದ ವ್ಯಕ್ತಿ ಬಂಧನ
