ಬೆಂಗಳೂರು: ಮಾಜಿ ಕಾರ್ಪೋರೇಟರ್ ಪತಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಕೊಲೆ ಮಾಡಿ ತಪ್ಪಿಸಿಕೊಂಡಿರುವ ಆರೋಪಿ ಮತ್ತಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಹೊರಹಾಕಿದ್ದಾನೆ. ಇದರಿಂದ ಪೊಲೀಸರ ತನಿಖೆ ಮೇಲೆಯೇ ಅನುಮಾನ ಮೂಡುವಂತಾಗಿದೆ.
Advertisement
ಜುಲೈ 13 ರಂದು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಜಿಮಾ ಖಾನ್ ಪತಿ ಆಯೂಬ್ ಖಾನ್‍ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖುದ್ದು ಅಯೂಬ್ ಖಾನ್ ಅಣ್ಣನ ಮಗ ಮತೀನ್ ಖಾನ್ ಎಂಬವನೇ ಚಾಕು ಇರಿದಿದ್ದ. ನಡುರಸ್ತೆಯಲ್ಲೇ ಕುಸಿದುಬಿದ್ದಿದ್ದ ಆಯೂಬ್ ಖಾನ್‍ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ರೂ ಬದುಕುಳಿಯಲಿಲ್ಲ.
Advertisement
Advertisement
ಇದೀಗ ಪತಿಯ ಹತ್ಯೆ ವಿರುದ್ಧ ಮಾಜಿ ಕಾರ್ಪೊರೇಟರ್ ನಾಜೀಮಾ ಖಾನ್ ಸಿಡಿದೆದ್ದಿದ್ದಾರೆ. ತನ್ನ ಪತಿ ಹಂತಕರ ತಲೆ ಕಡಿದವರಿಗೆ 10 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ ಎಂದು ಖುದ್ದು ಹತ್ಯೆ ಆರೋಪಿ ಪರಾರಿಯಾಗಿರುವ ಮತೀನ್ ಖಾನ್ ಹೇಳಿದ್ದಾನೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಒಂದಷ್ಟು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾನೆ. ಹತ್ತಾರು ವರ್ಷಗಳಿಂದ ಮಸೀದಿಯನ್ನು ಅಭಿವೃದ್ದಿ ಮಾಡಿದ್ದೆ, ಅಧ್ಯಕ್ಷ ಸ್ಥಾನ ಕೊಡ್ತಿನಿ ಅಂದಿದ್ದ ಚಿಕ್ಕಪ್ಪ ಅಯೂಬ್ ಖಾನ್ ಕೊನೆ ಕ್ಷಣದಲ್ಲಿ ತನ್ನ ಮಗನನ್ನು ಅಧ್ಯಕ್ಷನಾಗಿ ಮಾಡಿದ್ದ. ಆಗಲೂ ನಾನು ಸುಮ್ಮನಿದ್ದೆ. ಆದರೆ ಆಯೂಬ್ ಖಾನ್‍ಗೆ ನಾನು ಏರಿಯಾದಲ್ಲಿರೋದು ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ಗಲಾಟೆ ತೆಗೆದು ನನಗೆ ತೊಂದರೆ ಕೊಡ್ತಿದ್ದ. ಕೊಲೆಯಾದ ದಿನ ಕೂಡ ಆಯೂಬ್ ಖಾನ್ ಮತ್ತು ಮಗ ಇಬ್ಬರು ನನ್ನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡೋಕೆ ಮುಂದಾದ್ರು. ಪ್ರಾಣ ರಕ್ಷಣೆ ವೇಳೆ ಚಾಕು ತಗುಲಿ ಆಯೂಬ್ ಖಾನ್ ಸಾವನ್ನಪ್ಪಿದ್ದಾನೆ ಎಂದಿದ್ದಾನೆ. ಅಲ್ಲದೇ ಆಯೂಬ್ ಪತ್ನಿ ನಾಜೀಮಾಖಾನ್ ಸಾರ್ವಜನಿಕವಾಗಿ ಮತೀನ್ ಖಾನ್ ತಲೆ ತೆಗೆದವರಿಗೆ 10 ಕೋಟಿ ಕೊಡ್ತೀನಿ ಅಂತಾ ಘೋಷಿಸಿದ್ದಾರೆ ಅಂತಾ ವೀಡಿಯೋದಲ್ಲಿ ಹೇಳಿದ್ದಾನೆ.
Advertisement
ಆಯೂಬ್ ಖಾನ್ ಹೆಂಡತಿ ನಾಜೀಮಾ, ನನ್ನ ತಲೆ ಕಡಿದು ತಂದವರಿಗೆ ಹತ್ತು ಕೋಟಿ ಕೊಡ್ತೀನಿ ಅಂತಾ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾರೆ. ಆ ಹತ್ತು ಕೋಟಿನಾ, ಯಾರಿಗೆ ಕೊಡ್ತೀರಿ ಹೇಳಲಿ, ದರ್ಗಾದವರಿಗೆ, ನನ್ನ ಕುಟುಂಬದವರಿಗೆ ಕೊಡ್ತೀರಾ..? ಒಂದು ಕೆಲಸ ಮಾಡಿ ಶಾಸಕ ಜಮೀರ್ ಅಹಮದ್ ಖಾನ್‍ಗೆ ಕೊಡಲಿ, ನಾನೇ ತಲೆ ಕಡಿದುಕೊಳ್ತೀನಿ. ಇದನ್ನೂ ಓದಿ: ಕಾಲೇಜು ಯುವತಿಯರಿಗೆ ಕೆಮಿಕಲ್ ಸ್ಪ್ರೇ ಮಾಡ್ತಿದ್ದವನಿಗೆ ಸ್ಥಳೀಯರಿಂದ ಗೂಸಾ – ಪೊಲೀಸರ ವಶಕ್ಕೆ
ಶಾಸಕ ಜಮೀರ್ ಕೈಗೆ ಹತ್ತು ಕೋಟಿ ಕೊಡಿ: ಈ ಬಗ್ಗೆ ಸ್ಟಷ್ಟನೆ ನೀಡಿರುವ ಆರೋಪಿ ಮತೀನ್ ಖಾನ್, ನನ್ನ ತಲೆಗೆ ಹತ್ತು ಕೋಟಿ ಬೆಲೆ ಕಟ್ಟಲಾಗಿದೆ. ಆ ಹಣವನ್ನು ಶಾಸಕ ಜಮೀರ್ ಅಹ್ಮದ್ ಕೈಗೆ ಕೊಡಿ, ಆ ಹಣದಿಂದ ಜನರಿಗೆ ಸಹಾಯ ಮಾಡಲಿ. ನಾನೇ ನನ್ನ ತಲೆಯನ್ನು ಕಡಿದುಕೊಳ್ತೀನಿ ಅಂತಾ ಸವಾಲು ಹಾಕಿದ್ದಾರೆ. ಇದೇ ವೇಳೆ ಮಾತು ಮುಂದುವರಿಸಿರುವ ಮತೀನ್, ಘಟನೆ ಸ್ಥಳದಲ್ಲಿ ಸಿಸಿಟಿವಿ ಇದೆ ಅದನ್ನು ಪರಿಶೀಲನೆ ನಡೆಸಿ, ಮೊದಲಿಗೆ ಯಾರು ಹಲ್ಲೆ ಮಾಡಿದ್ದು, ಕೊಲೆಗೆ ಕಾರಣ ಏನು ಅನ್ನೋದು ತಿಳಿಯಲಿದೆ. ಯಾಕೆ ಪೊಲೀಸರು ಆ ಸಿಸಿಟಿವಿ ಬಹಿರಂಗ ಪಡಿಸ್ತಿಲ್ಲ. ಕಾರ್ಪೋರೇಟರ್ ಪರವಾಗಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ನಾನೇ ಪೊಲೀಸರ ಮುಂದೆ ಶರಣಾಗ್ತಿನಿ ಅಂತಾ ವೀಡೀಯೋದಲ್ಲಿ ಕೊಲೆ ಹಿಂದಿನ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ.
ಯಾರು ಏನೇ ಹೇಳಲಿ, ಅದ್ರಲ್ಲಿ ನನಗೆ ಯಾವುದೇ ವ್ಯತ್ಯಾಸ ಬರಲ್ಲ. ನಂಗೆ ಏರಿಯಾದಲ್ಲಿ ಏನೆಲ್ಲಾ ತೊಂದರೆ ಮಾಡಿದ್ರು ಅಂತಾ ನಮ್ಮ ಮೊಹಲ್ಲಾದ ಪ್ರತಿಯೊಬ್ಬರಿಗೂ ಗೊತ್ತಿದೆ. ಗಲಾಟೆ ನಡೆದ ಜಾಗದಲ್ಲಿ ಸಿಸಿಟಿವಿ ಇತ್ತು. ಕ್ಯಾಮೆರಾವನ್ನು ಪೊಲೀಸರು ಯಾಕೆ ತನಿಖೆಗೊಳಪಡಿಸುತ್ತಿಲ್ಲ? ಅವತ್ತು ನಾನು ಮಸೀದಿಗೆ ಹೋಗಿ ಬರ್ತಿದ್ದೆ. ಆ ಬಿಲ್ಡಿಂಗ್‍ನ ಕೆಳಗಡೆಯಿರುವ ಬೇಕರಿಯವರನ್ನು ಮಾಧ್ಯಮವರು ಹಿಡಿದು ಪ್ರಶ್ನಿಸಬೇಕು. ಮಸೀದಿ ಮುಂದಿರುವ ಡಿಪೋದಲ್ಲಿರುವವರನ್ನೂ ಪ್ರಶ್ನಿಸಿ ಇವನು ಹೇಗೆ ಬಂದ ಅಂತಾ. ನಾನು ಸರೆಂಡರ್ ಆಗ್ತೀನಿ. ನನಗೆ ಯಾವುದೇ ರೀತಿಯ ಭಯವಿಲ್ಲ. ಆದರೆ ಕೊಲೆಯಾದ ಜಾಗದಲ್ಲಿ ಸಿಸಿಟಿವಿ ಬಗ್ಗೆ ಕೇಳಿದ್ರೆ, ಅದು ವರ್ಕ್ ಆಗ್ತಾ ಇರಲಿಲ್ಲ ಅಂತಿದ್ದಾರೆ. ಹಾಗಾಗಿ ಪೊಲೀಸರ ತನಿಖೆ ಮೇಲೂ ಒಂದಷ್ಟು ಅನುಮಾನ ಮೂಡಿದ್ರೆ, ಮತ್ತೊಂದು ಕಡೆ ಆರೋಪಿಯನ್ನು ರಕ್ಷಣೆ ಮಾಡ್ತಿರೋದು ಯಾರು ಅನ್ನೋ ಅನುಮಾನ ಕೂಡ ಬರುತ್ತಿದೆ.