ChikkaballapurDistrictsKarnatakaLatestMain Post

ಕಾಲೇಜು ಯುವತಿಯರಿಗೆ ಕೆಮಿಕಲ್ ಸ್ಪ್ರೇ ಮಾಡ್ತಿದ್ದವನಿಗೆ ಸ್ಥಳೀಯರಿಂದ ಗೂಸಾ – ಪೊಲೀಸರ ವಶಕ್ಕೆ

Advertisements

ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ನೀರಿನ ಬಾಟಲಿಯಿಂದ ಔಷಧಿ ಮಾದರಿಯ ನೀರನ್ನು ಸ್ಪ್ರೇ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿಂತಾಮಣಿ ನಗರದ ಮಾರುತಿ ಸ್ಟೂಡಿಯೋ ಸರ್ಕಲ್‌ನಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ನಿಂತು ವಿದ್ಯಾರ್ಥಿನಿಯರಿಗೆ ಸುಖಾಸುಮ್ಮನೆ ಕೆಮಿಕಲ್ ಸ್ಪ್ರೇ ಮಾಡುತ್ತಿದ್ದ. ನೀರಿನ ಬಾಟಲಿಗೆ ಸ್ಪ್ರೇಯರ್ ಟ್ಯೂಬ್ ಸಹ ಆಳವಡಿಸಿ, ಅದರಿಂದ ಸಿಂಪಡಣೆ ಮಾಡುತ್ತಿದ್ದ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಸಾರಿಗೆ ಸಂಸ್ಥೆ – ಐರಾವತ ಬಸ್‍ನ್ನು ಜಪ್ತಿ ಮಾಡಿದ ನ್ಯಾಯಾಲಯ

ಶುಕ್ರವಾರ ವ್ಯಕ್ತಿಯ ಈ ವಿಚಿತ್ರ ವರ್ತನೆಯಿಂದ ಹೆದರಿದ ವಿದ್ಯಾರ್ಥಿನಿಯೊಬ್ಬಳು ಜೋರಾಗಿ ಕಿರುಚಿದ್ದಳು. ಕೂಡಲೇ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಚಿಂತಾಮಣಿ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ವ್ಯಕ್ತಿಯನ್ನು ಶ್ರೀನಿವಾಸಪುರ ಮೂಲದ ಶಿವು ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

Live Tv

Leave a Reply

Your email address will not be published.

Back to top button