ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia Ukraine War) ಸಾರಿ ಇಂದಿಗೆ 1 ವರ್ಷವಾಗಿದೆ. ಈ ಸಂಘರ್ಷದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡರೆ, ಅನೇಕರು ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆ ಉಕ್ರೇನ್‌ನಲ್ಲಿ ದಾಳಿ ಮಾಡುತ್ತಿರುವ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳಲು ವಿಶ್ವಸಂಸ್ಥೆ (United Nations) ನಿರ್ಣಯಿಸಿದೆ.
ವಿಶ್ವಸಂಸ್ಥೆ ನಡೆಸಿದ ಸದಸ್ಯ ರಾಷ್ಟ್ರಗಳ ಮಹಾ ಸಭೆಯಲ್ಲಿ ತಮ್ಮ ನಿರ್ಣಯವನ್ನು ತಿಳಿಸುವಂತೆ ಮತದಾನ ನಡೆಸಲಾಯಿತು. ವಿಶ್ವಸಂಸ್ಥೆಯ ಉದ್ದೇಶವನ್ನು 141 ರಾಷ್ಟ್ರಗಳು ಬೆಂಬಲಿಸಿದ್ದು, ರಷ್ಯಾ ಸೇರಿದಂತೆ 7 ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಭಾರತ (India), ಚೀನಾ (China) ಸೇರಿದಂತೆ 32 ದೇಶಗಳು ಮತ ಹಾಕದೇ ತಮ್ಮ ತಟಸ್ಥ ನಿಲುವನ್ನು ತೋರ್ಪಡಿಸಿಕೊಂಡಿದೆ.
Advertisement
Advertisement
ಭಾರತ ಉಕ್ರೇನ್‌ನ ಪ್ರಸ್ತುತ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಹಾಗೂ ಉಕ್ರೇನ್ ಆದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಿ, ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದೆ. ಇದನ್ನೂ ಓದಿ: ಕೆನಡಾ ಪೌರತ್ವ ಬದಲಾಯಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀರ್ಮಾನ
Advertisement
ಇದೇ ವೇಳೆ ಚೀನಾ ಕೂಡಾ ತಟಸ್ಥ ನಿಲುವನ್ನು ತೋರಿದ್ದು, ಶಾಂತಿಯುತವಾಗಿ ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್‌ಗೆ ಪಾಠ ಹೇಳಲು ಮುಂದಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅಣ್ವಸ್ತ್ರವೇ ಮುಖ್ಯವಲ್ಲ. ಅಸ್ತ್ರಗಳನ್ನು ಕಳುಹಿಸುವುದರಿಂದ ಶಾಂತಿಯನ್ನು ಕಾಪಾಡಲು ಸಾಧ್ಯವಿಲ್ಲ. ಇದು ಯುದ್ಧಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದು ಚೀನಾ ವಿಶ್ವಸಂಸ್ಥೆಗೆ ತಿಳಿಸಿದೆ.
Advertisement
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಭಾರೀ ಮೊತ್ತದ ಶಸ್ತ್ರಾಸ್ತ್ರಗಳನ್ನು ಒದಗಿಸಿವೆ. ಅಮೆರಿಕ ಹಾಗೂ ನ್ಯಾಟೋ ಕಳೆದ ವಾರ ಚೀನಾ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ನೀಡಲು ಮುಂದಾಗುತ್ತಿದೆ ಎಂದು ಆರೋಪಿಸಿ, ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ಆರೋಪವನ್ನು ಚೀನಾ ತಳ್ಳಿಹಾಕಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k