ಹೈದರಾಬಾದ್: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಈ ವರ್ಷ ಕೋಟಿ, ಕೋಟಿ ಹಣ ಹರಿದು ಬಂದಿದ್ದು, ಸುಮಾರು 833 ಕೋಟಿ ರೂಪಾಯಿ ಸಂಗ್ರಹವಾಗಿದೆ.
ತಿರುಪತಿ ದೇವಾಲಯದ (ಟಿಟಿಡಿ) ಮಂಡಳಿಯು ನಡೆಸಿದ ಹುಂಡಿ ಎಣಿಕೆಯಲ್ಲಿ 2021ರ ಜನವರಿ 1 ರಿಂದ ಡಿಸೆಂಬರ್ 30ರವರೆಗೂ 833 ಕೋಟಿ ರೂ. ಸಂಗ್ರಹವಾಗಿದೆ. ಕೊರೊನಾ ಎರಡನೇ ಅಲೆಯ ನಂತರ ಈ ವರ್ಷದಲ್ಲಿ ಸುಮಾರು 1.4 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯ ಆಡಳಿತ ಮಂಡಳಿಯು 5.96 ಕೋಟಿ ಲಡ್ಡು ಪ್ರಸಾದವನ್ನು ಭಕ್ತರಿಗೆ ನೀಡಿದೆ ಮತ್ತು ಸುಮಾರು 1.37 ಕೋಟಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ 1.4 ಕೋಟಿ ಭಕ್ತರಲ್ಲಿ 48.75 ಲಕ್ಷ ಮಂದಿ ದೇವರಿಗೆ ಮುಡಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ