ಗಾಂಧಿನಗರ: ಸ್ವಗ್ರಾಮಗಳಿಗೆ ಮರುಳುತ್ತಿದ್ದವರನ್ನ ತಡೆದ ಪೊಲೀಸರ ಮೇಲೆ ಪ್ರವಾಸಿ ಕಾರ್ಮಿಕರು ಕಲ್ಲು ತೋರಿ, ಹಲ್ಲೆ ನಡೆಸಿರುವ ಘಟನೆ ಅಹಮದಾಬಾದ್ ನ ವಸ್ತ್ರಪುರ ರಸ್ತೆಯಲ್ಲಿ ನಡೆದಿದೆ.
ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಗುಜರಾತ್‍ನ ಅಹಮದಾಬಾದಿನಿಂದ ನೂರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳತ್ತ ನಡೆದು ಹೊರಟಿದ್ದರು. ಈ ವೇಳೆ ಸ್ವಗ್ರಾಮಗಳಿಗೆ ತೆರಳದಂತೆ ಪೊಲೀಸರು ಕಾರ್ಮಿಕರನ್ನು ತಡೆದಿದ್ದಾರೆ. ಆಗ ಪೊಲೀಸರ ನಡೆಗೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದು, ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದೆ.
Advertisement
Gujarat: A clash between Police and migrant labourers took place in Ahmedabad today after the latter pelted stones at Police and vandalised their two vehicles allegedly over their demand to go back to their home states. 2 Police personnel injured. pic.twitter.com/qrem2eAYg7
— ANI (@ANI) May 18, 2020
Advertisement
ಈ ವೇಳೆ ಪ್ರವಾಸಿ ಕಾರ್ಮಿಕರನ್ನು ತಡೆಯಲು ಪೊಲೀಸರು ಟಯರ್ ಗ್ಯಾಸ್ ಸಿಡಿಸಿದ್ದರು. ಇದರಿಂದ ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಕಾರ್ಮಿಕರು ಪೊಲೀಸರ ಮೇಲೆ ಕಲ್ಲುಗಳನ್ನು ತೋರಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಕ್ಕೆ ಬಂದಿದ್ದು, ಕೆಲವು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
Advertisement