ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ – ತೋಟದಿಂದ ಮನೆಗೆ ಹೋಗ್ತಿದ್ದ ಯುವತಿ ಸಾವು

1 Min Read

ಚಿಕ್ಕಬಳ್ಳಾಪುರ: ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಂಡಹಳ್ಳಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಶಿವರಾಜ್ ಕುಮಾರ್ ಎಂಬವರ ಮಗಳಾದ ವರ್ಷಾ (19) ಮೃತ ಯುವತಿ. ಅಂದಹಾಗೆ ತೋಟದ ಕಡೆಯಿಂದ ಮನೆಗೆ ವಾಪಸ್ ಬರುತ್ತಿದ್ದಾಗ ವರ್ಷಾಳ ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ವರ್ಷಾ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ.

ಘಟನೆ ನಂತರ ಟಿಪ್ಪರ್ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಂದಿಗಿರಿಧಾಮ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬಂಡಹಳ್ಳಿ ಗ್ರಾಮದ ರಸ್ತೆ ಸೇರಿದಂತೆ ಮುದ್ದೇನಹಳ್ಳಿ ಮಾರ್ಗದ ಕಣಿವೆ ನಾರಾಯಣಪುರದ ಬಳಿ ಜಲ್ಲಿ ಕ್ರಷರ್‌ಗಳಿದ್ದು, ಈ ರಸ್ತೆಯಲ್ಲಿ ಟಿಪ್ಪರ್‌ಗಳ ಒಡಾಟ ಜಾಸ್ತಿಯಿದೆ. ಅದರಲ್ಲೂ ಅಧಿಕ ಭಾರ ಹೊತ್ತ ಟಿಪ್ಪರ್‌ಗಳ ಅತಿ ವೇಗದಿಂದ ಸಂಚಾರ ಮಾಡುತ್ತಿದ್ದು, ಜನ ಹಾಗೂ ವಾಹನ ಸವಾರರು ಆತಂಕದಿಂದ ರಸ್ತೆಯಲ್ಲಿ ಓಡಾಡುವಂತಾಗಿದೆ. ಹೀಗಾಗಿ ಟಿಪ್ಪರ್ ಲಾರಿಗಳ ಅತಿವೇಗದ ಓಡಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *