ಸಿಹಿ ತಿಂಡಿಗಳು ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡುತ್ತದೆ. ಅಂಜೂರ ಹಣ್ಣಿನಿಂದ ತಯಾರಿಸಲಾಗುವ ಹಲ್ವಾ ವಿಶೇಷ ರುಚಿ ಹಾಗೂ ಆರೋಗ್ಯವನ್ನು ನೀಡುತ್ತದೆ. ಹೀಗಾಗಿ ನೀವು ಇಂದು ಅಂಜೂರದ ಹಲ್ವಾ ಮಾಡಿ ಸವಿಯಿರಿ. ಇದನ್ನೂ ಓದಿ: 11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಅಂಜೂರ- 1ಕಪ್
* ಸಕ್ಕರೆ- 2ಕಪ್
* ಏಲಕ್ಕಿ
* ಚಕ್ಕೆ
* ಮಿಶ್ರ ಡ್ರೈ ಫ್ರೂಟ್ಸ್- 1ಕಪ್
* ತುಪ್ಪ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಯಾದ ಬಳಿಕ ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು.
* ನಂತರ ನೆನೆಸಿಕೊಂಡ ಅಂಜೂರ ಹಣ್ಣನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಬೇಕು.
* ಬಾಣಲೆಗೆ ನೀರನ್ನೂ ಸೇರಿಸಿ, ಮಿಶ್ರಣವು ಮೃದುವಾಗಿ ಬೇಯಲು ಬಿಡಬೇಕು.
* ಅಂಜೂರವು 10-15 ನಿಮಿಷಗಳ ಕಾಲ ಬೇಯಿಸಿದ ನಂತರ ಸಕ್ಕರೆಯನ್ನು ಸೇರಿಸಿ. ಅಂಜೂರದ ಹಣ್ಣು ಮತ್ತು ಸಕ್ಕರೆ ಚೆನ್ನಾಗಿ ಬೆರೆತು ದಪ್ಪ ಹದಕ್ಕೆ ಬರುವ ತನಕ ಬೇಯಿಸಬೇಕು.
* ಹಲ್ವಾ ಮಿಶ್ರಣ ದಪ್ಪವಾದ ಸ್ಥಿರತೆ ಪಡೆಯುತ್ತಿದ್ದಂತೆ ಚೆನ್ನಾಗಿ ಮಿಶ್ರಗೊಳಿಸಬೇಕು ಐದು ನಿಮಿಷಗಳ ಕಾಲ ಬೇಯಿಸಬೇಕು.
* ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಒಣ ಹಣ್ಣುಗಳನ್ನು ಫ್ರೈ ಮಾಡಿ ಅಂಜೂರದ ಹಲ್ವಾಗೆ ಸೇರಿಸಿದರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.