ಹೋಟೆಲ್ಗಳಲ್ಲಿ ಚಿಕನ್ ಚಾಪ್ಸ್ ರುಚಿ ನೋಡಿರುತ್ತೇವೆ. ಅದರೆ ಹಳ್ಳಿ ಸ್ಟೈಲ್ನಲ್ಲಿ ಚಿಕನ್ ಚಾಪ್ಸ್ ಮಾಡಿದರೆ ಹೇಗಿರುತ್ತೆ ಎಂಬುದನ್ನು ನೀವು ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
ಇರುಳ್ಳಿ-1 ದೊಡ್ಡ ಗಾತ್ರ
ಪುದೀನಾ ಸ್ವಲ್ಪ
ಕೊತ್ತಂಬರಿ ಸೊಪ್ಪು
ತೆಂಗಿನಕಾಯಿ ತುರಿ- 2 ಟೀ ಸ್ಪೂನ್
ಬೆಳುಳ್ಳಿ-1
ಹಸಿಮೆಣಸಿನ ಕಾಯಿ – 3 ರಿಂದ 4
ಚಕ್ಕೆ, ಲವಂಗ- 3 ರಿಂದ 4
ಶುಂಠಿ-1 ಚಿಕ್ಕ ಗಾತ್ರದ್ದು
ಚಿಕನ್ – ಅರ್ಧ ಕೇಜಿ
ಎಣ್ಣೆ- 1 ಕಪ್
ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಅರ್ಧ ಕೇಜಿ ಚಿಕನ್ಗೆ ಉಪ್ಪು, ಅರಿಶಿಣ ಹಾಕಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಇಟ್ಟಿರ ಬೇಕು.
* ಮೊದಲು ಮಿಕ್ಸಿ ಜಾರಿಗೆ ಒಂದು ಬೆಳ್ಳುಳ್ಳಿಯನ್ನು ಬಿಡಿಸಿ ಹಾಕಬೇಕು. ಜೊತೆಯಲ್ಲಿ ಅರ್ಧದಷ್ಟು ಶುಂಠಿ ಹಾಗೂ 3 ರಿಂದ 4 ಚೆಕ್ಕೆ ಹಾಕಬೇಕು. ನಂತರ ಪುದೀನಾ ಕೊತ್ತಂಬರಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಹಾಗೇ ಲವಂಗ, ಕಾಯಿ ತುರಿ 2 ಸ್ಪೂನ್ ಬೇಕಾದರೆ ದನಿಯಾ ಪೌಡರ್ ಹಾಕಿ ಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
Advertisement
* ನಂತರ ಒಂದು ಪಾತ್ರೆಯಲ್ಲಿ 2 ರಿಂದ 3 ಸ್ಪೂನ್ ಎಣ್ಣೆ ಹಾಕಿ ಸ್ಟವ್ ಮೇಲೆ ಇಟ್ಟು ಎಣ್ಣೆ ಬಿಸಿಯಾಗುವವರೆಗೆ ಕಾಯಬೇಕು.
* ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಬೇಕು.
* ನಂತರ ಚಿಕನ್ ಹಾಕಿ ಜೊತೆಯಲ್ಲಿಯೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಇಂಗುವವರೆಗೂ ಚಿಕನ್ ಫ್ರೈ ಮಾಡಬೇಕು.
* ಈ ಮೊದಲು ನಾವು ರುಬ್ಬಿ ತಯಾರಿಸಿದ ಮಸಾಲೆಯನ್ನು ಚಿಕನ್ಗೆ ಹಾಕಬೇಕು. ನಂತರ ಕಾಳುಮೆಣಸಿನ ಪುಡಿ ಹಾಕಬೇಕು, ಜೊತೆಯಲ್ಲಿ 1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.
* 10 ರಿಂದ 15 ನಿಮಿಷಗಳ ಚಿಕನ್ ಮಸಾಲೆಯೊಂದಿಗೆ ಮಿಶ್ರಣವಾಗುವವರೆಗೂ ಫ್ರೈ ಮಾಡಬೇಕು.
ಈಗ ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಸವಿಯಲು ಸಿದ್ಧವಾಗುತ್ತದೆ.