ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ್ದ ರಿಯಲ್ ಎಸ್ಟೇಟ್ ಅರಬ್‌ಟೆಕ್ ಹೋಲ್ಡಿಂಗ್ಸ್ ಕಂಪನಿ ದಿವಾಳಿಯಾಗಿದೆ.
ಕೋವಿಡ್ 19 ಬಿಕ್ಕಟ್ಟಿನಿಂದ ಕಂಪನಿ ದಿವಾಳಿಯಾಗಿದ್ದು ಲಿಕ್ವಿಡೇಷನ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಕಂಪನಿಯ ಈ ನಿರ್ಧಾರಕ್ಕೆ ಪಾಲುದಾರರ ಒಪ್ಪಿಗೆಯೂ ದೊರೆತಿದೆ.
ಕೊರೊನಾ ಕಾರಣದಿಂದ ಕೆಲಸ ನಡೆಯದ ಕಾರಣ ಸೌದಿ ಅರೇಬಿಯಾದ ಬಹುತೇಕ ರಿಯಲ್ ಎಸ್ಟೇಟ್ ಕಂಪನಿಗಳು ಈ ಸ್ಥಿತಿಯನ್ನು ಎದುರಿಸುತ್ತಿವೆ. ಕಂಪನಿಯ ನಿರ್ಧಾರದಿಂದ 40 ಸಾವಿರ ನೌಕರರ ಭವಿಷ್ಯ ಡೋಲಾಯಮಾನವಾಗಿದೆ.
2020ರ ಮೊದಲ ಅರ್ಧ ವರ್ಷದಲ್ಲಿ 216 ದಶಲಕ್ಷ ಡಾಲರ್ ನಷ್ಟ ಅನುಭವಿಸಿದೆ ಎಂದು ಅರಬ್‌ಟೆಕ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬುರ್ಜ್ ಖಲೀಫಾ ಅಲ್ಲದೇ ಲೌವ್ರೆ ಮ್ಯೂಸಿಯಂ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯನ್ನು ಅರಬ್ ಟೆಕ್ ಕಂಪನಿ ಪಡೆದುಕೊಂಡಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಸರ್ಕಾರ ಮತ್ತು ಸಂಸ್ಥೆಗಳು ಕಟ್ಟಡ ನಿರ್ಮಾಣದ ಕೆಲಸವನ್ನು ಕೋವಿಡ್ 19ನಿಂದ ಸ್ಥಗಿತಗೊಳಿಸಿದೆ ಮತ್ತು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ನಿರ್ಧಾರದ ಹಲವು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಭಾರೀ ಹೊಡೆತ ನೀಡಿದೆ.