ಬೆಂಗಳೂರು: ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
2020 ಡಿಸೆಂಬರ್ 14ರಂದು ಕರಡು ಗೆಜೆಟ್ ಹೊರಡಿಸಿದ್ದ ರಾಜ್ಯ ಸರ್ಕಾರ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಈಗ ಕೆಲವು ಮಾರ್ಪಾಡುಗಳೊಂದಿಗೆ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಲಿದೆ.
ವಿಜಯನಗರ ಜಿಲ್ಲೆಗೆ 6 ತಾಲೂಕುಗಳು: ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ. ಹರಪನಹಳ್ಳಿ
ವಿಜಯನಗರ ಗಡಿ ಸರಹದ್ದು ರಚನೆ
ಪೂರ್ವ: ಚಿತ್ರದುರ್ಗ, ಬಳ್ಳಾರಿ ಜಿಲ್ಲೆ
ಪಶ್ಚಿಮ: ಗದಗ, ಹಾವೇರಿ ಜಿಲ್ಲೆ
ಉತ್ತರ : ಕೊಪ್ಪಳ ಜಿಲ್ಲೆ
ದಕ್ಷಿಣ: ದಾವಣಗೆರೆ ತಾಲ್ಲೂಕು, ಹರಿಹರ ತಾಲ್ಲೂಕು
ಬಳ್ಳಾರಿ ಜಿಲ್ಲೆಗೆ 5 ತಾಲೂಕುಗಳು: ಬಳ್ಳಾರಿ, ಸಂಡೂರು, ಕಂಪ್ಲಿ, ಕುರುಗೋಡು, ಸಿರುಗುಪ್ಪ
ಬಳ್ಳಾರಿ ಜಿಲ್ಲೆ ಗಡಿ ಸರಹದ್ದು ರಚನೆ
ಪೂರ್ವ: ಆಂಧ್ರಪ್ರದೇಶ ರಾಜ್ಯ
ಪಶ್ಚಿಮ: ನೂತನ ವಿಜಯನಗರ ಜಿಲ್ಲೆ
ಉತ್ತರ: ರಾಯಚೂರು ಜಿಲ್ಲೆ
ದಕ್ಷಿಣ: ಆಂಧ್ರಪ್ರದೇಶ ರಾಜ್ಯ