ಲಡಾಖ್‍ನಲ್ಲಿ ಯೋಧರ ಭರ್ಜರಿ ಸ್ಟೆಪ್- ನೆಟ್ಟಿಗರಿಂದ ಭಾರೀ ಮೆಚ್ಚುಗೆ

Public TV
2 Min Read
jawans

ನವದೆಹಲಿ: ಭಾರತೀಯ ಯೋಧರು ಬಿಡುವಿನ ವೇಳೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದು, ಯೋಧರ ಜೋಶ್ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಲಡಾಖ್‍ನ ಪಾಂಗೋಂಗ್ ತ್ಸೋ ಸರೋವರದ ಬಳಿ ಯೋಧರು ಭರ್ಜರಿಯಾಗಿ ಡ್ಯಾನ್ಸ್ ಮಾಡುವ ವೀಡಿಯೋವನ್ನು ಕೇಂದ್ರ ಸಚಿವ ಕಿರೆನ್ ರಿಜಿಜು ಮಾರ್ಚ್ 25ರಂದು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಸಾಲುಗಳನ್ನು ಬರೆದಿರುವ ಬಿಜೆಪಿ ಕೇಂದ್ರ ಸಚಿವರು, ಯೋಧರು ಈ ರೀತಿ ಆನಂದಿಸುವುದನ್ನು ನೋಡಲು ಹೆಮ್ಮೆಯಾಗುತ್ತದೆ. ಭಾರತೀಯ ಸೇನೆಯ ಗೋರ್ಖಾದ ಕೆಚ್ಚೆದೆಯ ಯೋಧರು ಹಾಗೂ ಸಿಬ್ಬಂದಿ ಲಡಾಖ್‍ನ ಪಾಂಗೋಂಗ್ ತ್ಸೋ ಸರೋವರದ ಬಳಿ ಫುಲ್ ಮ್ಯೂಸಿಕ್‍ನೊಂದಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ವೀಡಿಯೋದಲ್ಲಿ ಯೋಧರು ಪೆಪ್ಪಿ ಹಾಡಿಗೆ ಫುಲ್ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರು ಯೋಧರು ಫುಲ್ ಜೋಶ್ ನಲ್ಲಿ ಕುಣಿದು ಕುಪ್ಪಳಿಸಿದ್ದು, ಉಳಿದವರು ಇದನ್ನು ಕಂಡು ಫುಲ್ ಎಂಜಾಯ್ ಮಾಡಿದ್ದಾರೆ. ಈ ವೀಡಿಯೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವು ರೀ ಟ್ವೀಟ್ ಮಾಡಿ ಹಾಗೂ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಈ ವೀಡಿಯೋ 1 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದ್ದು, ಸಾವಿರಕ್ಕೂ ಅಧಿಕ ಜನ ರೀಟ್ವೀಟ್ ಮಾಡಿದ್ದಾರೆ. 13 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅಲ್ಲದೆ ಹಲವರು ಕಮೆಂಟ್ ಮಾಡುವ ಮೂಲಕ ತಮ್ಮ ಖುಷಿ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸುಂದರ ವೀಡಿಯೋವನ್ನು ಫುಲ್ ಎಂಜಾಯ್ ಮಾಡಿದ್ದೇವೆ. ಯೋಧರ ಈ ಸ್ಪಿರಿಟ್ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ.

ಬಳಕೆದಾರರೊಬ್ಬರು ತುಂಬಾ ಸುಂದರವಾಗಿದೆ, ನಿಜವಾದ ಸಂತೋಷ ಎಂದರೆ ಇದು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಲವ್ಡ್ ಇಟ್, ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಸಹೋದರರೇ, ಜೈ ಹಿಂದ್ ಎಂದು ತಿಳಿಸಿದ್ದಾರೆ.

Share This Article