ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರ ವಾರ್ಡ್ ನಲ್ಲಿ ಇಂದು ಕೊರೊನಾ ಸಂತ್ರಸ್ತರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.
ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸಾವಿರಾರು ಜನರಿಗೆ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ರವರ ಸೇವೆ ಇಡೀ ರಾಜ್ಯಕ್ಕೆ ಮಾದರಿ ಅವರ ಸೇವೆ. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೊಗಳಿದರು. ಇದನ್ನೂ ಓದಿ: ಡೈವಿಂಗ್ ವೇಳೆ ಆಟಗಾರನಿಗೆ ಡಿಕ್ಕಿ – ಫಾಫ್ ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು
Advertisement
ಕಳೆದ ವರ್ಷವೂ ಸಹ ಕೊರೊನಾ ಸಂತ್ರಸ್ತರಿಗೆ ಪ್ರತಿನಿತ್ಯ ಐವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯ ಉಪಾಹಾರವನ್ನು ವಿತರಿಸುತ್ತಿದ್ದರು. ಪ್ರಸ್ತುತ ಕೊರೊನಾ ಎರಡನೇ ಅಲೆಯಲ್ಲಿಯೂ ಸಹ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ದಿನನಿತ್ಯ ಉಪಾಹಾರವನ್ನು ವಿತರಿಸುತ್ತಿದ್ದಾರೆ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಇಂತಹ ಜನನಾಯಕರಿಂದ ಜನರಿಗೆ ಸಂಕಷ್ಟದ ಕಾಲದಲ್ಲಿ ಸಹಾಯವಾಗುತ್ತದೆ ಎಂದು ಹೇಳಿದರು.
Advertisement
ಲಕ್ಕಸಂದ್ರ ವಾರ್ಡ್'ನ ಮಹಾಲಿಂಗೇಶ್ವರ ಬಡಾವಣೆಯ ನಿವಾಸಿಗಳಿಗೆ 905 ದಿನಸಿ ಕಿಟ್'ಗಳನ್ನು ವಿತರಿಸಲಾಯಿತು.
ಉಳಿದ 1100 ದಿನಸಿ ಕಿಟ್'ಗಳನ್ನು ನಾಳೆ ವಿತರಿಸಲಾಗುತ್ತದೆ.
ಜೊತೆಗೆ, ಪೌರ ಕಾರ್ಮಿಕರು, ಆಟೋ, ಟಿಪ್ಪರ್, ಲಾರಿ ಹಾಗೂ ಕಾಂಪ್ಯಾಕ್ಟರ್ ಚಾಲಕರು ಮತ್ತು ಮೇಸ್ತ್ರಿಗಳಿಗೆ ಕೂಡ 126 ದಿನಸಿ ಕಿಟ್'ಗಳನ್ನು ವಿತರಿಸಲಾಯಿತು.#Congress pic.twitter.com/fJFPY7u4pa
— Ramalinga Reddy (@RLR_BTM) June 12, 2021
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆನಂದ್ ಮಾಜಿ ಪಾಲಿಕೆ ಸದಸ್ಯರಾದ ಮೋಹನ್, ಚಂದ್ರಪ್ಪ, ಪಕ್ಷದ ಮುಖಂಡರಾದ ಎಂ. ಸುರೇಶ್ ಎಸ್.ಮನೋಹರ್.ಜಿ. ಜನಾರ್ದನ್ ಉಪಸ್ಥಿತರಿದ್ದರು.