ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಮತ್ತೆ ಕತ್ತಲು

Public TV
2 Min Read
Ranu Mondal

ಮುಂಬೈ: ರೈಲ್ವೇ ಪ್ಲಾಟ್‍ಫಾರಂನಲ್ಲಿ ಕುಳಿತು ‘ಏಕ್ ಪ್ಯಾರ್ ಕಾ ನಗ್ಮಾ’ ಎಂದು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ಬದುಕಲ್ಲಿ ಮತ್ತೆ ಕತ್ತಲು ಆವರಿಸಿದೆ.

ranu mondal 1

ಸೋಶಿಯಲ್ ಮೀಡಿಯಾದ ಮಿಂಚಿನ ಚಮತ್ಕಾರದಿಂದ ಬಾಲಿವುಡ್ ಸಿನಿಮಾದ ಹಾಡಿಗೆ ರಾನು ಮೊಂಡಲ್ ಧ್ವನಿಯಾಗಿದ್ದನ್ನು ಕಂಡು ದೇಶದ ಜನತೆ ನಿಬ್ಬೆರಗಾಗಿದ್ದರು. ಪ್ಲಾಟ್‍ಫಾರಂನಲ್ಲಿ ಹಾಡು ಹೇಳುತ್ತಾ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಬದುಕನ್ನು ಒಂದು ಹಾಡು ಮುಗಿಲೆತ್ತರಕ್ಕೆ ಕರೆದೊಯಯ್ಯುದಿತ್ತು. ಗಾಯಕಿಯ ಧ್ವನಿಗೆ ಫಿದಾ ಆಗಿದ್ದ ಸಂಗೀತ ನಿರ್ದೇಶಕ ಹಿಮೇಶ್ ರೆಶ್ಮಿಯಾ ಅವಕಾಶ ನೀಡಿದ್ದರು. ರಾನು ಮೊಂಡಲ್ ಹಾಡಿದ್ದ ಮೊದಲ ಹಾಡು ‘ತೇರಿ ಮೇರಿ ಕಹಾನಿ’ ಸೂಪರ್ ಹಿಟ್ ಆಗಿತ್ತು. ಎಲ್ಲರ ರಿಂಗ್ ಟೋನ್ ಗಳಾಗಿ ರಾನು ಮೊಂಡಲ್ ಹಾಡು ಬದಲಾಗಿತ್ತು.  ಇದನ್ನೂ ಓದಿ: ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

ranu mondal main

ಅನಂತರ ರಾನು ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋಗೆ ಅತಿಥಿಯಾಗಿ ಸಹ ಆಗಮಿಸಿದ್ದರು. ಹೀಗೆ ಬಾಲಿವುಡ್ ಸಭೆ ಸಮಾರಂಭಗಳಲ್ಲಿಯೂ ರಾನು ಮೊಂಡಲ್ ಕಾಣಿಸಿಕೊಳ್ಳಲಾರಂಭಿಸಿದ್ದರು. ಹಲವು ರಾಜ್ಯಗಳಲ್ಲಿ ರಾನು ಸಂಗೀತ ಕಾರ್ಯಕ್ರಮ ನೀಡಿದ್ದರು. ಇಷ್ಟೆಲ್ಲ ಖ್ಯಾತನಾಮವಾದ ಬಳಿಕ ಇದೀಗ ರಾನು ಮೊಂಡಲ್ ಬದುಕಲ್ಲಿ ಮತ್ತೆ ಅಂಧಕಾರದ ಛಾಯೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

ranu mondal himesh reshmiyya

ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಾನು ಮೊಂಡಲ್ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿರುವ ರಾನು ಮೊಂಡಲ್ ಲಾಕ್‍ಡೌನ್ ಮುಂಚೆ ಗಳಿಸಿದ ಹಣದಲ್ಲಿಯೇ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ಮುಂಬೈಗೆ ಬಂದ ನೆಲೆಸಿದ್ರೂ ರಾನು ಕೈ ಮಾತ್ರ ಖಾಲಿಯಾಗಿದೆ. ಇದ್ದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

ranu mondal 5

ಈ ಹಿಂದೆ ರಾನು ಕಾನ್ಪುರದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ರಾನು ಹಾಕಿದ್ದ ಹೆವಿ ಮೇಕಪ್ ಫೋಟೋಗಳು ಟ್ರೋಲ್ ಆಗಿದ್ದವು. ಟ್ರೋಲ್ ಬಳಿಕ ರಾನು ಮೊಂಡಲ್ ಗೆ ಮೇಕಪ್ ಮಾಡಿದ್ದ ಮೇಕ್‍ಓವರ್ ಆರ್ಟಿಸ್ಟ್ ಅಸಲಿ ಫೋಟೋಗಳನ್ನು ರಿವೀಲ್ ಮಾಡುವ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2019ರ ಮೈಸೂರು ದಸರಾಗೆ ರಾನು ಮೊಂಡಲ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದ್ರೆ ಅನಾರೋಗ್ಯ ಹಿನ್ನೆಲೆ ರಾನು ಮೊಂಡಲ್ ಅವರ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ ಮೈಸೂರು ಜನತೆಯಲ್ಲಿ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ಸಿಂಗಿಂಗ್, ಕ್ಯಾಟ್‍ವಾಕ್ ನಂತ್ರ ರೇಡಿಯೋ ಸ್ಟೇಷನ್‌ನಲ್ಲಿ ರಾನು ಮೊಂಡಲ್: ವಿಡಿಯೋ

Share This Article
Leave a Comment

Leave a Reply

Your email address will not be published. Required fields are marked *