ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಹೊಸ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜಕೀಯ, ಸಿನಿಮಾದಲ್ಲಿ ಇರುವ ಇವರು ಇದೀಗ ಕುಟುಂಬದ ನೆಚ್ಚಿನ ಕೆಲಸ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ಲಾಕ್‍ಡೌನ್ ಇರುವ ದಿನಗಳಿಂದ ಕುಮಾರಸ್ಟಾಮಿ ಕುಟುಂಬ ಬಿಡದಿ ತೋಟದ ಮನೆಯಲ್ಲಿದ್ದಾರೆ. ಈ ವೇಳೆ ನಿಖಿಲ್ ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆದಿರುವ ರಾಗಿಯನ್ನು ದೇವೇಗೌಡರು ಪರಿಶೀಲಿಸುತ್ತಿರುವ ವೀಡಿಯೋವನ್ನು ನಿಖಿಲ್ ಕುಮಾರಸ್ವಾಮಿ ಅವರು ಇನ್‍ನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ರಾಮನಗರದ ಕೇತಗಾನಹಳ್ಳಿಯಲ್ಲಿ ನಾನು ಮತ್ತು ಕುಮಾರಣ್ಣನವರು ಅತ್ಯಂತ ಪ್ರೀತಿ, ಕಕ್ಕುಲತೆಗಳಿಂದ ಕೃಷಿ ಮಾಡಿದ್ದೇವೆ. ನಮ್ಮಿಬ್ಬರ ಈ ಕೃಷಿ ಕಾರ್ಯವನ್ನು ಮಣ್ಣಿನ ಮಗ, ರೈತರ ನಾಯಕ ದೇವೇಗೌಡರು ಖುದ್ದು ವೀಕ್ಷಿಸಿ ಖುಷಿಪಟ್ಟ ಸಂದರ್ಭವಿದು ಎಂದು ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಎಚ್‍ಡಿ ದೇವೇಗೌಡರು ಮತ್ತು ಚೆನ್ನಮ್ಮ ದೇವೇಗೌಡರು ತಮ್ಮ 67ನೇ ವಿವಾಹ ವಾರ್ಷಿಕೋತ್ಸವವನ್ನು ತೋಟದಲ್ಲಿ ತೆಂಗಿನ ಸಸಿ ನೆಡುವುದರ ಮೂಲಕ ಸರಳವಾಗಿ ಆಚರಿಸಿಕೊಂಡಿದ್ದರು. ವಿಶೇಷ ತಳಿಯ ಗೋವುಗಳನ್ನು ನಿಖಿಲ್ ಕುಮಾರಸ್ವಾಮಿ ಖರೀದಿ ಮಾಡಿದ್ದಾರೆ. ನಿಖಿಲ್ ಅವರು ಕೃಷಿಕಡೆಗೆ ಹೆಚ್ಚು ಗಮನವನ್ನು ಕೊಡುತ್ತಿದ್ದಾರೆ.
View this post on Instagram
ರೈಡರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ, ರಾಮನಗರದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಜನರ ಸೇವೆ ಮಾಡುತ್ತಾ, ಇದೀಗ ಕೃಷಿಯತ್ತ ಮುಖ ಮಾಡಿರುವ ಕುರಿತಾಗಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.