ನವದೆಹಲಿ: ಚೀನಿ ವೈರಸ್ ಭಾರತವನ್ನು ವಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮೇಕಪ್ ಗೆ ಕೊರೊನಾ ಅಡ್ಡಿಯಾಗಿದೆ ಅಂತಾನೇ ಹೇಳಬಹುದು. ಈ ಮಧ್ಯೆ ಮಹಿಳೆಯೊಬ್ಬರು ಹುಡುಕಿಕೊಂಡ ಐಡಿಯಾಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
Advertisement
ಹೌದು. ಸದ್ಯ ಮಾಸ್ಕ್ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಮುಖದ ಅರ್ಧ ಭಾಗವನ್ನು ಮುಚ್ಚಿಕೊಳ್ಳುವುದು ತಮಾಷೆಯಲ್ಲ. ಅದರಲ್ಲೂ ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾದರೆ ಮಾಸ್ಕ್ ಧರಿಸಲೇ ಬೇಕಾಗಿದೆ. ಅಂತೆಯೇ ಮದುವೆಗೆ ಬಂದ ಮಹಿಳೆಯೊಬ್ಬಳು ಧರಿಸಿರುವ ಮಾಸ್ಕ್ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಈ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿದೆ.
Advertisement
Advertisement
ಫೋಟೋದಲ್ಲಿ ಮಹಿಳೆ ದೊಡ್ಡದಾದ ಮೂಗುತಿಯನ್ನು ಎನ್-95 ಮಾಸ್ಕ್ ಮೇಲೆ ಪಿನ್ ಮಾಡಿದ್ದಾಳೆ. ಉಳಿದಂತೆ ಆಭರಣಗಳನ್ನು ಧರಿಸಿರುವುದನ್ನು ನಾವು ಫೋಟೋದಲ್ಲಿ ಕಾಣಬಹುದಾಗಿದೆ. ಈ ಫೋಟೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Advertisement
#JewelleryJugaad level "Super Ultra Pro Max…" ???????????? pic.twitter.com/2JV0NpX2v3
— Dipanshu Kabra (@ipskabra) May 7, 2021
ಫೊಟೋದಲ್ಲಿದ್ದ ಮಹಿಳೆಯನ್ನು ಕವಿತಾ ಜೋಶಿ ಎಂದು ಗುರುತಿಸಲಾಗಿದೆ. ಈಕೆ ಉತ್ತರಾಖಂಡ್‍ನ ನೈನಿತಲ್ ಜಿಲ್ಲೆಯ ಘೋಡಖಲ್ ನಿವಾಸಿ. ಈಕೆ ಸೊಸೆಯ ಮದುವೆ ಕಾರ್ಯಕ್ರಮದಲ್ಲಿ ವಿಶೇಷ ರೀತಿಯಲ್ಲಿ ಪಾಲ್ಗೊಂಡಿದ್ದು, ನೆರರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
????????..ये भी समझना बहुत ज़रूरी है कि एक महिला के लिए श्रृंगार की बहुत अहमियत होती है ..????
— Shobhna Yadav (@ShobhnaYadava) May 7, 2021
ಈ ಸಂಬಂಧ ಮಾತನಾಡಿರುವ ಕವಿತಾ, ಸೊಸೆಯ ಮದುವೆಯಾಗಿದ್ದು, ನಾನು ಆಕೆಯ ದೊಡ್ಡ ಅತ್ತೆಯಾಗಿದ್ದು, ತುಂಬಾ ಹತ್ತಿರದ ಸಂಬಂಧಿಯಾಗಿದ್ದೇನೆ. ಹೀಗಾಗಿ ನಾನು ಮದುವೆಯಲ್ಲಿ ಪಾಲ್ಗೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಇತ್ತ ಕೊರೊನಾ ವೈರಸ್ ಕೂಡ ಅಟ್ಟಹಾಸ ಮೆರೆಯುತ್ತಿದ್ದರಿಂದ ನಾನು ಕೊರೊನಾ ನಿಯಮ ಕೂಡ ಪಾಲಿಸಲೇಬೇಕಾಗಿತ್ತು. ಮದುವೆಗೆ ಚೆನ್ನಾಗಿ ರೆಡಿ ಆಗಬೇಕಿತ್ತು. ಮೂಗುತಿ ವಿವಾಹಿತ ಮಹಿಳೆಯರಿಗೆ ಶುಭವೆಂದು ಪರಿಗಣಿಸಲಾಗಿದೆ. ಹೀಗಾಗಿ ಮಾಸ್ಕ್ ಒಳಗೆ ಧರಿಸಲು ನನಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಮೇಲೆಯೇ ಮೂಗುತಿಯನ್ನು ಪಿನ್ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.
Mask with fashion… ????????
Chahe koi bhi mahamari aa jaye fashion me koi kami nhi rhne dengi ye mahilayein…. ????????
Fashion k aage Corona ki kya aukaat… ????????
— Vishesh Jaiswal (@I_Me_Vishesh) May 7, 2021
ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಲವಾರು ಪರ-ವಿರೋಧ ಕಾಮೆಂಟ್ ಗಳು ಹರಿದುಬಂದವು.