ಮಲೆಯಾಳಂ ಬಿಗ್‍ಬಾಸ್ ಶೂಟಿಂಗ್ ಸೆಟ್‍ಗೆ ಬೀಗ ಜಡಿದ ಪೊಲೀಸರು

Public TV
1 Min Read
bigg boss maleylam

ಚೆನ್ನೈ: ಕೊರೊನಾ ಲಾಕ್‍ಡೌನ್ ನಡುವೆ ನಡೆಯುತ್ತಿದ್ದ ಮಲೆಯಾಳಂನ ಬಿಗ್‍ಬಾಸ್ ಶೋನ ಶೂಟಿಂಗ್ ಸೆಟ್‍ಗೆ ದಾಳಿ ಮಾಡಿದ ಪೊಲೀಸರು ಬೀಗ ಜಡಿದಿದ್ದಾರೆ.

big boss 1

ಕೊರೊನಾ ಎರಡನೇ ಅಲೆಯಿಂದಾಗಿ ದೇಶದಲ್ಲಿ ಚಲಚಚಿತ್ರ ಮತ್ತು ಧಾರವಾಹಿಗಳ ಚಿತ್ರೀಕರಣಕ್ಕೆ ನಿಷೇಧವಿದೆ. ಆದರೆ ಮಲೆಯಾಳಂನ ಬಿಗ್‍ಬಾಸ್ ಶೋದ ಚಿತ್ರೀಕರ ಚೆನ್ನೈನ ಇವಿಪಿ ಫಿಲಂ ಸಿಟಿ ಚೆಂಬರಂಕ್ಕಂನಲ್ಲಿ ನಡೆಯುತ್ತಿತ್ತು. ಹಾಗಾಗಿ ಇಲ್ಲಿಗೆ ದಾಳಿ ಮಾಡಿದ ಕಂದಾಯ ವಿಭಾಗೀಯ ಅಧಿಕಾರಿ ತಿರುವಳ್ಳೂರು, ಪ್ರೀತಿ ಪಾರ್ಕವಿ ನೇತೃತ್ವದ ತಂಡ ಶೂಟಿಂಗ್ ಸೆಟ್‍ನಲ್ಲಿದ್ದವರನೆಲ್ಲ ಹೊರಹಾಕಿ ಸೆಟ್‍ಗೆ ಬೀಗ ಹಾಕಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ ಶೂಟಿಂಗ್ ಸೆಟ್‍ನಲ್ಲಿದ್ದ 8 ಜನ ಕೆಲಸಗಾರರಿಗೆ ಕೊರೊನಾ ಪಾಸಿಟಿವ್ ಆಗಿತ್ತು ಎಂದು ವರದಿಯಾಗಿದೆ.

CORONAVIRUS

ತಮಿಳುನಾಡು ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಸರ್ಕಾರದ ನಿಯಮ ಉಲ್ಲಂಘಣೆ ಆಧಾರದಲ್ಲಿ ಕೇಸ್ ಕೂಡ ದಾಖಲಾಗಿದೆ. ಮೂಲಗಳ ಪ್ರಕಾರ ಬಿಗ್‍ಬಾಸ್ ಮಲೆಯಾಳಂ ಶೋನಲ್ಲಿ ಒಟ್ಟು 14 ಜನ ಸ್ಪರ್ಧಿಗಳಿದ್ದರು ಮತ್ತು ಖ್ಯಾತ ನಟ ಮೋಹನ್‍ಲಾಲ್ ಶೋವನ್ನು ನಡೆಸಿಕೊಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *