ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2.30ಕ್ಕೆ ಪೊಲೀಸ್ ಕಮಿಷನರ್ ಗೆ ದೂರು ನೀಡುವುದಾಗಿ ಸಿಡಿ ಲೇಡಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
ಪ್ರಕರಣ ಸಂಬಂಧ ಸಿಡಿ ಲೇಡಿ ಇಂದು ತನ್ನ ಮೂರನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಇಂದು ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ವಕೀಲ ಜಗದೀಶ್ ಮಾತನಾಡಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಎಸ್‍ಐಟಿಯನ್ನು ಸೆಟಪ್ ಮಾಡಿದೆ ಎಂದರು.
ಸಿಡಿಯಲ್ಲಿರುವ ಯುವತಿಯ ಕಾನೂನಿನ ರಕ್ಷಣೆಗೆ ನಾವು ಓಪನ್ ಅನೌನ್ಸ್ ಮೆಂಟ್ ಮಾಡಿದ್ದೀವಿ. ಆಕೆ ಕೂಡ ನನಗೆ ರಕ್ಷಣೆ ಬೇಕೆಂದು ಬಹಿರಂಗವಾಗಿಯೇ ಒಂದು ವೀಡಿಯೋ ಬಿಡುಗಡೆ ಮಾಡಿದ್ದಳು. ಇಂದು ಆಕೆಯೇ ಒಂದು ಲಿಖಿತ ದೂರು ಬರೆದು ಕಳುಹಿಸಿದ್ದಾಳೆ. ಅದನ್ನು ನಾವು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಅವರಿಗೆ ಇಂದು ಮಧ್ಯಾಹ್ನ 2.30ಕ್ಕೆ ತಲುಪಿಸುತ್ತೇವೆ. ಅಲ್ಲದೆ ಅದರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ ಅಂದ್ರು.
ಮುಂದೆ ಕಮಿಷನರ್ ಆಫೀಸ್ ನಲ್ಲಿ ಏನೇನು ಬೆಳವಣಿಗೆಗಗಳು ಆಗುತ್ತವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಆಕೆಯ ಪೋಷಕರಿಗೂ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಾಳೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಪೊಲೀಸರು, ಎಸ್‍ಐಟಿ ಹಾಗೂ ಯಡಿಯೂರಪ್ಪ ಸರ್ಕಾರ ಆಕೆಗೆ ನ್ಯಾಯ ಕೊಡುತ್ತೆ ಅಂತ ಭಾವಿಸುತ್ತೇವೆ. ಅಲ್ಲದೆ ಆಕೆಗೆ ರಕ್ಷಣೆ ಕೊಟ್ಟರೆ ಆಕೆಯೇ ಪೊಲೀಸರ ಮುಂದೆ ಬಂದು ಹೇಳಿಕೆ ದಾಖಲಿಸುತ್ತಾಳೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.
ಸಿಡಿ ಲೇಡಿ ಇಂದು ಹೇಳಿದ್ದೇನು..?
ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ. 24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.