ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ

Public TV
1 Min Read
couple 768x404 1

– ಸೆಕ್ಸ್ ಮಾಡಿದ್ರೆ ದೆವ್ವ ಮಗನ ದೇಹ ಸೇರುತ್ತೆ

ಗಾಂಧಿನಗರ: ಮಾವನೊಬ್ಬ ತನ್ನ ಮಗನೊಂದಿಗೆ ಸೊಸೆ ಸೆಕ್ಸ್ ಮಾಡುವುದನ್ನು ತಡೆದಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

ವಡೋದರಾ ನಿವಾಸಿ ಮಹಿಳೆ ಇದೀಗ ಗಾಂಧಿನಗರದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮಾಮ ನನಗೆ ದೆವ್ವ ಹಿಡಿದಿದೆ ಎಂದು ಹೇಳಿ ನನ್ನ ಪತಿಯೊಂದಿಗೆ ಸೆಕ್ಸ್ ಮಾಡುವುದನ್ನು ತಡೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

marriage 1

ವಡೋದರಾ ಜಿಲ್ಲೆಯ ಅಲ್ಕಪುರಿ ಮೂಲದ 43 ವರ್ಷದ ಮಹಿಳೆ ಗಾಂಧಿನಗರ ನಿವಾಸಿ ಜೊತೆ ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ಮಹಿಳೆ ಗಾಂಧಿನಗರದಲ್ಲಿರುವ ತನ್ನ ಪತಿಯ ಮನೆಯಲ್ಲಿ ವಾಸ ಮಾಡುತ್ತಿದ್ದರು.

ನನಗೆ ದೆವ್ವ ಹಿಡಿದಿದೆ ಎಂದು ನಮ್ಮ ಮಾವ ನಂಬಿದ್ದಾನೆ. ಅಲ್ಲದೆ ಪತಿಯೊಂದಿಗೆ ಸೆಕ್ಸ್ ಮಾಡುವುದನ್ನು ತಡೆದಿದ್ದಾನೆ. ಒಂದು ವೇಳೆ ನಾನು ಪತಿಯಿಂದ ಲೈಂಗಿಕ ಸಂಬಂಧ ಬೆಳೆಸಿದರೆ ಆ ದೆವ್ವ ಪತಿಯ ದೇಹವನ್ನೂ ಪ್ರವೇಶಿಸುತ್ತದೆ ಎಂದು ನಂಬಿದ್ದಾನೆ. ಅವರ ನಡವಳಿಕೆಗೆ ನಾನು ವಿರೋಧಿಸಿದಾಗ ಅತ್ತೆ-ಮಾವ ಮತ್ತು ಪತಿ ಮೂವರ ಸೇರಿಕೊಂಡು ಥಳಿಸಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

room

ಅಲ್ಲದೇ ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಅತ್ತೆ ನನಗೆ ಲೈಂಗಿಕ ಕಿರುಕುಳ ನೀಡುವಂತೆ ಮಾವನನ್ನು ಪ್ರಚೋದಿಸುತ್ತಾಳೆ. ಮಾರ್ಚ್ 10 ರಂದು ಪತಿಯ ಮನೆಯಿಂದ ಹೊರಹೋಗುವಂತೆ ನನಗೆ ಒತ್ತಾಯಿಸಿದರು. ನಂತರ ಪರಿಚಯಸ್ಥರು, ಸಂಬಂಧಿಸಿಕರು ಮನೆಗೆ ಬಂದು ರಾಜಿ ಮಾಡಲು ಪ್ರಯತ್ನಿಸಿದ್ದರು. ಆದರೆ ಪತಿಯ ಮನೆಯವರು ಕೊನೆಗೂ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಮಹಿಳೆ ತಿಳಿಸಿದ್ದಾರೆ.

ಈ ಕುರಿತು ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪತಿಯ ಮನೆಯವರು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸದ್ಯಕ್ಕೆ ಮಹಿಳೆ ಗಾಂಧಿನಗರ ಪೊಲೀಸರನ್ನು ಸಂಪರ್ಕಿಸಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Police I

Share This Article
Leave a Comment

Leave a Reply

Your email address will not be published. Required fields are marked *