ರಾಯಚೂರು: 74ನೇ ಸ್ವಾತಂತ್ರ್ಯೋತ್ಸವವನ್ನ ಭಾರತದಲ್ಲಿ ಮಾತ್ರವಲ್ಲ ದೇಶಪ್ರೇಮಿಗಳು ಬ್ರೆಜಿಲ್‍ನಲ್ಲೂ ಆಚರಿಸಿದ್ದಾರೆ.
ಬ್ರೆಜಿಲ್‍ನ ಪರಾನಾ ರಾಜ್ಯದ ರಾಜಧಾನಿ ಕುರಿಟಿಬಾ ನಗರದಲ್ಲಿ ಕನ್ನಡಿಗ ರಾಯಚೂರಿನ ರಂಗರಾವ್ ದೇಸಾಯಿ ಕುಟುಂಬ ತಮ್ಮ ಮಗಳ ಶಾಲೆಯಲ್ಲಿ ಭಾರತದ ರಾಷ್ಟ್ರಧ್ವಜಾರೋಣ ಮಾಡಿ ದೇಶ ಭಕ್ತಿ ಮೆರೆದಿದ್ದಾರೆ. ಮಕ್ಕಳಾದ ಲಹರಿ ದೇಸಾಯಿ ,ರಘುಮಾನ್ಯ ಓದುವ ಕಾಲೇಜಿಯೋ ಪೊಸಿಟಿವೋ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಧ್ವಜಾರೋಹಣ ಮಾಡಿದ್ದಾರೆ.
Advertisement
Advertisement
ತಾಯಿ ಸುವರ್ಣ ದೇಸಾಯಿ, ಹೆಂಡತಿ ಅಶ್ವಿನಿ ದೇಸಾಯಿ ಹಾಗೂ ಮಕ್ಕಳ ಜೊತೆ ರಾಷ್ಟ್ರಗೀತೆಯನ್ನ ಹಾಡಿ ಶಾಲೆ ಸಿಬ್ಬಂದಿಗೂ ಭಾರತ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದ್ದಾರೆ. ಬಳಿಕ ಭಾರತದ ಮಹಾನ್ ಚೇತನರ ಹಾಗೂ ಸ್ವತಂತ್ರ್ಯಹೋರಾಟಗಾರರ ಪುಸ್ತಕಗಳನ್ನು ಸ್ವಾತಂತ್ರ್ಯದಿನದ ನಿಮಿತ್ತ, ಶಾಲೆಯ ನಿರ್ದೇಶಕರಿಗೆ, ಅವರ ಪರಿವಾರದವರಿಗೆ ಮತ್ತು ಶಾಲೆಯ ಸಿಬ್ಬಂದಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
Advertisement
Advertisement
ಎರಡು ವರ್ಷಗಳಿಂದ ಬ್ರೆಜಿಲ್‍ನಲ್ಲಿ ನೆಲೆಸಿರುವ ರಂಗರಾವ್ ದೇಸಾಯಿ ರಾಬರ್ಟ ಬಾಷ್ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸಹ ಮಗಳ ಶಾಲೆಯಲ್ಲಿ ಆಡಳಿತ ಮಂಡಳಿ ಅನುಮತಿ ಪಡೆದು ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿದ್ದರು.