ಭುವನೇಶ್ವರ: ಕೊರೊನ ಲಾಕ್‍ಡೌನ್ ಎಫೆಕ್ಟ್ ಕೇವಲ ಮನುಷ್ಯರಿಗೆ ಮಾತ್ರ ತಟ್ಟಿಲ್ಲ ಬದಲಾಗಿ ಬೀದಿಬದಿ ಪ್ರಣಿಗಳು ಹಸಿವಿನಿಂದ ಬಳಲುವಂತಾಗಿದೆ. ಇದನ್ನ ಮನಗಂಡ ಒಡಿಶಾ ಸರ್ಕಾರ ಬೀದಿಬದಿ ಪ್ರಾಣಿಗಳಿಗೆ ಆಹಾರ ನೀಡುತ್ತಿದೆ.
Advertisement
ಪ್ರಾಣಿ ದಯಾ ಸಂಘಗಳ ಸಹಕಾರ ನೀಡಿ ಬೀದಿ ಆಹಾರಗಳನ್ನು ಆಶ್ರಯಿಸಿದ್ದ ನಾಯಿ, ಹಸು, ಮಂಗಗಳು ಸೇರಿದಂತೆ ಅನೇಕ ಪ್ರಾಣಿಗಳಿಗೆ ಸರ್ಕಾರ ಆಹಾರವನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಒಡಿಶಾ ಚೀಪ್ ಮಿನಿಸ್ಟರ್ ರಿಲೀಫ್ ಫಂಡ್ ನಿಂದ ಪರಿಹಾರ ನೀಡಲಾಗಿದೆ.
Advertisement
Odisha: State Govt has approved Rs 54 lakhs from Chief Minister’s Relief Fund for feeding stray animals in 5 Municipal Corporations and all 48 Municipalities of the state during #CoronavirusLockdown period. pic.twitter.com/Dermc7nbCK
— ANI (@ANI) March 30, 2020
Advertisement
ಈ ಸೇವೆಗಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 60 ಲಕ್ಷ ಹಣವನ್ನ ಮೀಸಲಿಟ್ಟಿದ್ದಾರೆ. ಈ ಹಣವನ್ನು 48 ಮುನಿಸಿಪಾಲ್ ಕಾರ್ಪೊರೇಷನ್, 61 ನೋಟಿಫೈಡ್ ಏರಿಯಾ ಕೌನ್ಸಿಲ್ ಗಳು ವಿನಿಯೋಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
Advertisement
ಮೇ 5ರಿಂದ 19ರವರೆಗೆ ಕೊರೊನಾ ಲಾಕ್‍ಡೌನ್ ಘೋಷಣೆಯಾಗಿದೆ. ಕಳೆದ 7 ದಿನಗಳಿಂದ ಒಡಿಶಾದಲ್ಲಿ ಕೊರೊನಾ ಸೋಂಕಿನ ಪ್ರಕರಣ ಹತ್ತು ಸಾವಿರ ಗಡಿಯನ್ನು ದಾಟುತ್ತಿದೆ.