ರುಚಿಯಾದ ಮತ್ತು ಆರೋಗ್ಯಕರವಾದ ಆಹಾರವನ್ನು ಸವಿಯಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಹೀಗಿರುವಾಗ ನೀವು ಇಂದು ಮನೆಯಲ್ಲಿ ಪಾಲಾಕ್ ಪೂರಿಯನ್ನು ಮಾಡಲು ಪ್ರಯತ್ನಿಸಿ.
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಗೋಧಿ ಹಿಟ್ಟು – 2ಕಪ್
* ಹಸಿಮೆಣಸಿನ ಕಾಯಿ – 5
* ಪಾಲಾಕ್ ಸೊಪ್ಪು – 3 ಕಟ್ಟು
* ಜೀರಿಗೆ – 2 ಟೀ ಸ್ಪೂನ್
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ -2 ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾಲಾಕ್ ಸೊಪ್ಪಿಗೆ ಉಪ್ಪು ಬೆರೆಸಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
* ನಂತರ ಬಾಣಲೆಯಲ್ಲಿ ಪಾಲಾಕ್ ಸೊಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ.
* ಬೇಯಿಸಿದ ಪಾಲಾಕ್ ಸೊಪ್ಪು ಜೀರಿಗೆ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ನಂತರ ಗೋಧಿ ಹಿಟ್ಟಿಗೆ ಈ ಪಾಲಾಕ್ ಮಿಶ್ರಣವನ್ನು ಸೇರಿಸಿ ಪೂರಿ ಹಿಟ್ಟನ್ನು ನಾದಿಕೊಳ್ಳಿ.
* ಈ ಹಿಟ್ಟಿನಿಂದ ಪೂರಿಯನ್ನು ಸಿದ್ಧಪಡಿಸಿಕೊಂಡು ಎಣ್ಣೆಯಲ್ಲಿ ಕರಿದರೆ ರುಚಿಯಾದ ಪಾಲಾಕ್ ಪೂರಿ ಸವಿಯಲು ಸಿದ್ಧವಾಗುತ್ತದೆ.