ಕೋಲಾರ: ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವ್ಯಂಗ್ಯಮಾಡಿದರು.
Advertisement
ಕೋಲಾರದ ಮಾಲೂರಿನಲ್ಲಿ ಶಾಸಕ ಕೆ.ವೈ.ನಂಜೇಗೌಡ ಹುಟ್ಟು ಹಬ್ಬದ ಪ್ರಯುಕ್ತ ಕೊರೊನಾ ವಾರಿಯರ್ಸ್‍ಗಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಒಳ್ಳೆ ಭವಿಷ್ಯ ಬಂದಿಲ್ಲ. ಬದಲಾಗಿ ಬಿಜೆಪಿ ನಾಯಕರಿಗೆ ಮಾತ್ರ ಅಚ್ಚೇ ದಿನ ಬಂದಿದೆ. ಪಿಎಂ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಲ್ಲೂ ಆಗಿಲ್ಲ. ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ, ಒಂದು ಕಡೆ ಕೊರೊನಾದಿಂದ ಜನ ಸಾಯುತ್ತಿದ್ದರೆ, ಮತ್ತೊಂದಡೆ ತೈಲ ಬೆಲೆ ಏರಿಕೆ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ:ಕೊರೊನಾ ನಿಯಮ ಮರೆತು ಲಸಿಕೆಗೆ ಮುಗಿಬಿದ್ದ ಜನರು
Advertisement
Advertisement
ಪಿಎಂ ಅವರಿಗೆ ತೈಲ ಬೆಲೆ ಏರಿಕೆಯ ತೆರಿಗೆ ಕಡಿಮೆ ಮಾಡಲು ಆಗುತ್ತಿಲ್ಲ. ಕೊರೊನಾ ಸಮಯದಲ್ಲಿ ಯಾರಾದರೂ ಮೋಸ ಮಾಡಿ ಹಣ ತಿಂದರೆ ಹುಳು ಬೀಳುತ್ತೆ. ರಾಜ್ಯ ಸರ್ಕಾರ ಆಟೋ ಚಾಲಕರಿಗೆ ನೀಡಿರುವ ಪರಿಹಾರ ನಾಮಕಾವಸ್ಥೆ, ಅದು ಅಪ್ ಲೋಡ್ ಮಾಡಲು ಅಪ್ಲಿಕೇಶನ್ನೇ ಓಪನ್ ಆಗುತ್ತಿಲ್ಲ, ಅದಕ್ಕೆ ಬದಲಾಗಿ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ 10 ಸಾವಿರ ರೂಪಾಯಿ ಹಾಕಿ. ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಹಣ ಹಾಕಿದ್ದಾರೆ. ಅವರದು ಜನ ಪರ ಕಾಳಜಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
Advertisement
ನಿನ್ನೆ ಪ್ರಧಾನಿ ಮೋದಿ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಟೆಸ್ಟಿಂಗ್ ಕಡಿಮೆ ಮಾಡಿದ್ದಾರೆ. ಮೊದಲು ಎರಡುವರೆ ಲಕ್ಷ ಟೆಸ್ಟಿಂಗ್ ಮಾಡುತ್ತಿದ್ದರು. ಈಗ 94 ಸಾವಿರ ಜನರಿಗೆ ಟೆಸ್ಟಿಂಗ್ ಮಾಡುತ್ತಿದ್ದಾರೆ. ಕೊರೊನಾ ಹೋಗಲಾಡಿಸಲು ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಈಗ ನೋಡಿದರೆ ವ್ಯಾಕ್ಸಿನ್ ಸಿಗುತ್ತಿಲ್ಲ. ಜನರಿಗೆ ವ್ಯಾಕ್ಸಿನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೇ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು. ಇದನ್ನು ಓದಿ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ