ಬಾತ್‌ಟಬ್‌ಗೆ ಬಿತ್ತು ಫೋನ್‌ – ವಿದ್ಯುತ್‌ ಶಾಕ್‌ಗೆ ಯುವತಿ ಬಲಿ

Public TV
1 Min Read
bathtub

ಮಾಸ್ಕೋ: ಚಾರ್ಜಿಂಗ್‌ನಲ್ಲಿದ್ದ ಐಫೋನ್‌ ಬಾತ್‌ ಟಬ್‌ಗೆ ಬಿದ್ದ ಪರಿಣಾಮ ಸ್ನಾನ ಮಾಡುತ್ತಿದ್ದ 24 ವರ್ಷದ ಯುವತಿ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾದ ಅರ್ಖಾಂಗೆಲ್ಸ್ಕ್ ನಗರದ  ಮನೆಯಲ್ಲಿ ಯುವತಿ ವಾಸವಾಗಿದ್ದಾಗ ಈ ಘಟನೆ ನಡೆದಿದೆ. ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡಿ, ಸ್ನೇಹಿತೆ ಸ್ನಾನ ಮಾಡುತ್ತಿದ್ದ ಬಾತ್‌ಟಬ್‌ನಲ್ಲಿ ಐಫೋನ್‌ ಚಾರ್ಜಿಂಗ್‌ ಮೋಡ್‌ನಲ್ಲಿ ಇತ್ತು ಎಂದು ತಿಳಿಸಿದ್ದಾಳೆ.

ಮರಣೋತ್ತರ ಪರೀಕ್ಷೆಯಲ್ಲೂ ಈಕೆ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿರುವ ಅಂಶ ದೃಢಪಟ್ಟಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ರಷ್ಯಾ ಸರ್ಕಾರದ ತುರ್ತು ಸಚಿವಾಲಯ ಆರೋಗ್ಯ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ.

iPhone 2

ವಿದ್ಯುತ್‌ ಉಪಕರಣಗಳನ್ನು ಅದಷ್ಟು ನೀರಿನಿಂದ ದೂರವಿಡಿ. ಅದರಲ್ಲೂ ವಿದ್ಯುತ್‌ ಸಂಪರ್ಕದಲ್ಲಿದ್ದಾಗ ಇದರಿಂದ ಜೀವಕ್ಕೆ ಅಪಾಯವಾಗುತ್ತದೆ ಎಂದು ಜನರಲ್ಲಿ ಮನವಿ ಮಾಡಿದೆ.

ಚಾರ್ಜಿಂಗ್‌ನಲ್ಲಿದ್ದ ಫೋನ್‌ ಬಾತ್‌ ಟಾಬ್‌ಗೆ ಬಿದ್ದು ವ್ಯಕ್ತಿಗಳು ರಷ್ಯಾದಲ್ಲಿ ಮೃತಪಡುತ್ತಿರುವುದು ಇದೆ ಮೊದಲೆನಲ್ಲ. ಈ ಹಿಂದೆ ಆಗಸ್ಟ್‌ನಲ್ಲಿ 15 ವರ್ಷದ ಬಾಲಕಿ ಮತ್ತು 2019ರಲ್ಲಿ 26 ವರ್ಷದ ಯುವತಿ ಬಾತ್‌ರೂಮ್‌ನಲ್ಲಿ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *