ಫ್ಯಾಂಟಮ್‍ನಲ್ಲಿ ವಿಕ್ರಾಂತ್ ರೋಣನ ಬ್ಯಾಟಿಂಗ್-ವಿಡಿಯೋ ನೋಡಿ

Public TV
2 Min Read
P4PHANTOM080210

ಬೆಂಗಳೂರು: ಫ್ಯಾಂಟಮ್ ಚಿತ್ರೀಕರಣದ ವೇಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬ್ಯಾಟ್ ಬೀಸಿದ್ದಾರೆ. ಚಿತ್ರೀಕರಣದ ವೇಳೆ ತಾವು ಹೇಗೆ ಸಮಯ ಕಳೆಯುತ್ತೇವೆ ಎಂಬುದರ ವಿಡಿಯೋವನ್ನು ಸುದೀಪ್ ಇಂದು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

PHANTOM 1

ಶೂಟಿಂಗ್ ಸೆಟ್ ಹೊರಗಡೆ ಕಿಚ್ಚ ಸುದೀಪ್ ಚಿತ್ರತಂಡದ ಜೊತೆಗೆ ಕ್ರಿಕೆಟ್ ಆಡಿದ್ದಾರೆ. ನಮ್ಮ ಸುತ್ತಲೂ ನಡೆಯುತ್ತಿರುವುದರ ಜೊತೆಗೆ ನಾವು ಸಹ ಸಾಗಬೇಕಿದೆ. ಇವುಗಳಲ್ಲಿ ಕೆಲವೇ ಕೆಲವು ಉತ್ತಮವಾದ ಕ್ಷಣಗಳು ನಮ್ಮದಾಗುತ್ತವೆ. ನಿಮಗೆ ಸಂತೋಷ ಮತ್ತು ಶಕ್ತಿಯನ್ನು ನೀಡುವ ಉತ್ತಮವಾದ ಅಂಶಗಳನ್ನು ಅತ್ಯುತ್ತಮ ಮಾಡಿಕೊಳ್ಳುವುದು ಒಳ್ಳೆಯದು. ಎರಡೂವರೆ ತಿಂಗಳು ಚಿತ್ರೀಕರಣದಲ್ಲಿ ಭಾಗಿಯಾಗಲು ಅವಕಾಶ ನೀಡಿದ ಫ್ಯಾಂಟಮ್ ಚಿತ್ರತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಹೊಡೆದಿರುವ ಶಾಟ್ ಅಷ್ಟೇನೂ ಕೆಟ್ಟದಾಗಿಲ್ಲ ಅಲ್ಲವಾ? ಎಂದು ಸುದೀಪ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Phantom

ಲಾಕ್‍ಡೌನ್ ಬಳಿಕ ಫ್ಯಾಂಟಮ್ ಸಿನಿಮಾದಲ್ಲಿ ಶೂಟಿಂಗ್‍ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಆರಂಭವಾದಾಗ ಚಿತ್ರತಂಡ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡುವ ಮೂಲಕ ಸಿನಿ ಅಂಗಳದಲ್ಲಿ ಧೂಳೆಬ್ಬಿಸಿತ್ತು. ತದನಂತರ ಕೋಟೆ ದ್ವಾರದಲ್ಲಿ ಗನ್ ಹಿಡಿದು ಕುಳಿತ ರೋಣನ ಲುಕ್ ಗೆ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ಫ್ಯಾಂಟಮ್ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುತ್ತಿರುವ ನಟಿ ನೀತಾ ಅಶೋಕ್ ಪಾತ್ರದ ಬಗ್ಗೆ ಮಾಹಿತಿ ನೀಡಿತ್ತು.

Sudeep Phantom

ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರೂ ಸುದೀಪ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಯಾಂಕ್ ಅಗರ್ವಾಲ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಂಜಾಬ್ ಮತ್ತು ಆರ್‍ಸಿಬಿ ತಂಡಗಳ ನಡುವೆ ಪಂದ್ಯವಿದ್ದಾಗಲೂ ಸುದೀಪ್ ಟ್ವೀಟ್ ಮಾಡಿದ್ದರು.

ಫ್ಯಾಂಟಮ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಭರವಸೆಯನ್ನು ಹೆಚ್ಚಿಸುತ್ತಾ ಬಂದಿದೆ. ಲಾಕ್‍ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ ಫ್ಯಾಂಟಮ್, ಚಿತ್ರದ ಹೊಸ ಹೊಸ ಲುಕ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೈಯಲ್ಲಿ ಗನ್ ಹಿಡಿದು ಕುಳಿತ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ದಟ್ಟಾರಣ್ಯದಲ್ಲಿ ಹೊರಟ ವಿಕ್ರಾಂತ್ ರೋಣನ ಒಂದು ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *